..
ಈತನೀಗ ವಾತಜಾತನು ತನ್ನ ಪ
ತÁತಗಾಗಿ ದನುಜಕುಲವಘಾತಿಸಿದ ವನೌಕಸಾರ್ಯ ಅ.ಪ.
ಅಂಬುಧಿಯ ಲಂಘಿಸಿ ಭರದಿಲಂಬ ಶಿಖರದಲ್ಲಿ ಧುಮುಕಿಸಂಭ್ರಮದಿಂದ ಲಂಕೆಗೆ ಪೋಗಿಅಂಬುಜಾಕ್ಷಿಯನರಸಿದಾತ1
ಧರಣಿಸುತೆಯ ಚರಣಕೆರಗಿಕರುಣಿ ರಾಮನುಂಗುರವಿತ್ತುಕರದಿ ದಾನವರನು ಸವರಿಶರಧಿಯನುತ್ತರಿಸಿದಾತ 2
ಕಡಲ ತಡಿಯೊಳಿರ್ದ ಕಪಿಗ-ಳೊಡನೆ ರಾಮನಂಘ್ರಿಗೆರಗಿಮಡದಿ ಚೂಡಾರತುನವಿತ್ತುಕಡು ಕೃತಾರ್ಥನೆನಿಸಿಕೊಂಡ 3
ದುರುಳ ಕೌರವನನುಜನುರವಕರದಿ ಸೀಳಿ ರಕ್ತವ ಸುರಿದುನರಸಿಂಹನಿಗೆ ಅರ್ಪಿಸಿದಧರೆಗೆ ಭೀಮನೆನಿಸಿದಾತ 4
ಇಳೆಯೊಳಿದ್ದ ಮಧ್ಯಗೇಹನಕುಲದಿ ಜನಿಸಿ ಶುದ್ಧವಾದನಳಿನನಾಭನ ಒಲುಮೆಯಿಂದಮಲಿನರನ್ನು ಅಳಿದ ಧೀರ 5
ಇಪ್ಪತೊಂದು ಕುಮತಗಳನುಒಪ್ಪದಿಂದ ಗೆಲಿದು ಭಕ್ತಕಲ್ಪವೃಕ್ಷನೆನಿಸಿ ಮೆರೆದಸರ್ಪಶಯನನ ನಿಜವ ತೋರ್ದ6
ಧರಣಿ ಮಂಡಲದೊಳಗೆ ಭೂಮಿಸುರರ ಗಣಕೆ ಶಾಸ್ತ್ರಾಮೃತವಎರೆದು ಕೃಷ್ಣನ ಇರವ ತೋರಿವರ ಬದರಿಯೊಳ್ ನಿಂದ ಧೀರ7
***
No comments:
Post a Comment