..
ಕರುಣದಿ ಪಾಲಿಸೆನ್ನ ಶ್ರೀ ಹಯ ವದನ ಪ
ಕರುಣದಿ ಪಾಲಿಸೊ ಕರಿವರದನೆ ನಿನ್ನ
ಚರಣ ಕಮಲಗಳಿಗೆರಗಿ ಬೇಡಿಕೊಂಬೆ ಅ.ಪ
ಅಗಣಿತ ಮಹಿಮನೆ ನಗಪಾಣಿ ಶ್ರೀಶನೆ
ಖಗವರ ವಾಹನ ನಿಗಮ ಗೋಚರನದ
ಮೃಗರೂಪ ಮೂರ್ಜಗದೊಡೆಯನೆ ನಿನ್ನ
ಮೀಗೆ ಹರುಷದಿಂದ ಪೊಗಳುವ ಸುಖವಿತ್ತು
ಹಗಲಿರುಳೆನ್ನದೆ ಅಘು ಕಳೆದು ಕಾಯೊ
ಗಗನಾಳಕ ವಂದಿತ ತ್ವರಿತದಿ ಕರ
ಮುಗಿದು ಬೇಡುವೆ ಸಂತತ ಮರಿಯದೆಪೊರೆ ಪ
ನ್ನಗ ಶಾಯಿ ಶ್ರೀ ಭೂನಾಥ ನಿನ್ನಯ ಪಾದ
ಯುಗ ಸೇವೆ ನೀಡಯ್ಯ ನಗವೈರಿ ಮಗ ಸೂತ 1
ಕ್ಷಿತಿಜೆರಮಣ ದ್ರೌಪದಿ ರಕ್ಷಕನೆ ನಿನ್ನ ಸುರ
ಯತಿ ತತಿ ಸನ್ನುತ ಪತಿತೋದ್ಧಾರಕಮನ್
ಮಥ ಪಿತ ಮುರಹರ ಶೃತಿ ಪತಿ ಪಾದ್ಯನೆ ಸಂ
ತತ ನಿನ್ನಯ ಪಾದ ಶತಪತ್ರ ನಂಬಿದೆ
ಹಿತದಿ ಎನ್ನಯ ದುರ್ಮತಿ ಕಳೆದು ಕಾಯೊ
ಶತ ಮಖಾನುಜ ಗೋವಿಂದ ಬಾಗುವೆ ಶಿರ
ದಿತಿಜಾರಿ ನಿತ್ಯಾನಂದ ಮಾತುಳ ವೈರಿ
ವಿತತ ಮಹಿಮ ಮುಕುಂದ ನಿನ್ನನುದಿನ
ಸ್ತುತಿಪ ಭಾಗ್ಯವ ಕೊಡು ಕೃತಿ ಪತಿ ಭರದಿಂದ 2
ಇಂದಿರಾಧವ ಶಾಮಸುಂದರ ವಿಠಲನೆ
ಮಂದರ ಗಿರಿ ಪೊತ್ತು ಮಂದಜಾಸನಪಿತ
ವಂದಿತ ಭಕ್ತಮಂದಾರ ಮಾಧವ ಸುರ
ವೃಂದ ವಿನುತ ದಯಾಸಿಂಧು ದಿನ ಬಂಧು
ಇಂದು ನಿನ್ನಯ ಪಾದ ಪೊಂದಿದೆ ಸಂತತ
ಕಂದನೆಂದರಿದೆನ್ನ ಕುಂದು ಎಣಿಸದೆ ದಯ
ದಿಂದ ಪಾಲಿಸು ಹೇದೇವ ನಂಬಿದೆ ದಶ
ಕಂಧರಾಂತಕ ರಾಘವ ಬೇಡುವೆ ದಶ
ಶ್ಯಂದನ ಸುತ ವರವ ಪಾಲಿಸಿ ಕಾಯೊ
ಕಂದರ್ಪ ಪಿತ ಕುಂತಿನಂದನರ ಭಾವಾ 3
***
No comments:
Post a Comment