Sunday, 5 September 2021

ಕೆಡುವೆಯೇಕೋ ಮನುಜ ಕೆಡುವೆಯೇಕೋ ankita ramadasa.a

 ಅಸೂರಿ ರಾಮಸ್ವಾಮಿ ಅಯ್ಯಂಗಾರ್ ankita ramadasa

ಕೆಡುವೆಯೇಕೋ ಮನುಜ ಕೆಡುವೆಯೇಕೋ ಪ 


ಪೊಡವಿಯಾ ಸುಖ ಸ್ಥಿರವದೆಂಬ ದೃಢವನಾಂತು ನೀ ಅ.ಪ 


ಧನವಗಳಿಸಲೇಂ ಮನುಜಾ ಮನೆಗಳೀಡಾಡೆ ಎನಿತು ಬಳಗಮಿರ್ಪೊಡೇನು ತನುವಿನಾಸೆಯಿಂ 1 

ಮರೆವೆಯೇತಕೋ ಮನುಜಾ ಅರಿಯಲೆನ್ನುತಾ ಬರಿಯ ಮಾಯೆಯೀ ಪ್ರಪಂಚ ಚಿರವೆಂದೆನ್ನುತಾ 2 

ರಂಗಮಾಲೋಲನಾ ಮಾಂಗಿರೀಶನ ನೆನೆ[ದರೆ] ಹಿಂಗದೇ ಭವಬಂಧಗಳನು | ಭಂಗಗೈಯನೇ 3 

ಕಾಲದೂತ ರಂಗ ಕಾಲಿನಿಂದೊದೆಯುವಾಗ ಬಾಲರಾಮದಾಸ[ನುತನ] ನಲಿದು ನೆನೆಯದೆ 4

***


No comments:

Post a Comment