Sunday, 5 September 2021

ಈ ಪರಿಯ ಸೊಬಗಾವ ದೇವರಲಿ ಕಾಣೆ purandara vittala EE PARIYA SOBAGAAVA DEVARALI KAANE


raga hamsanandi


raga kamboji



similar by kanakadasaru

ಈ ಪರಿಯ ಸೊಬಗಾವ ದೇವರಲಿ ಕಾಣೆ ||ಪ||

ಗೋಪೀಜನಪ್ರಿಯ ಗೋಪಾಲಗಲ್ಲದೆ ||ಅ||

ದೊರೆಯತನದಲಿ ನೋಡೆ ಧರಣಿದೇವಿಗೆ ರಮಣ
ಸಿರಿಯತನದಲಿ ನೋಡೆ ಶ್ರೀಕಾಂತನು
ಹಿರಿಯತನದಲಿ ನೋಡೆ ಸರಸಿಜೋದ್ಭವನಯ್ಯ
ಗುರುವುತನದಲಿ ನೋಡೆ ಜಗದಾದಿ ಗುರುವು ||೧||

ಪಾವನತ್ವದಿ ನೋಡೆ ಅಮರಗಂಗಾಜನಕ
ದೇವತ್ವದಲಿ ನೋಡೆ ದಿವಿಜರೊಡೆಯ
ಲಾವಣ್ಯದಲಿ ನೋಡೆ ಲೋಕಮೋಹಕನಯ್ಯ
ಆವ ಧೈರ್ಯದಿ ನೋಡೆ ಅಸುರಾಂತಕ ||೨||

ಗಗನದಲಿ ಸಂಚರಿಪ ಗರುಡದೇವನೆ ತುರಗ
ಜಗತೀಧರ ಶೇಷ ಪರಿಯಂಕಶಯನ
ನಿಗಮಗೋಚರ ಪುರಂದರವಿಠಲಗಲ್ಲದೆ
ಮಿಗಿಲಾದ ದೈವಗಳಿಗೀ ಭಾಗ್ಯವುಂಟೇ ||೩||
*****

ರಾಗ ಕಾಂಭೋಜ ಝಂಪೆತಾಳ (raga tala may differ in audio)
Hamsanandi –Khanda Chapu

I pariya sobagava devarali kane ||pa||

Gopijanapriya gopalagallade ||a.pa||

Doreyatanadalli node dharanidevige ramana
Siriyatanadali node srikantanu
Hiriyatanadali node sarasijodbavanayya
Guruvutanadali node jagadadiguruvu ||1||

Pavanatvadi node amaragangajanaka
Devatvadali node divijarodeya
Lavanyadali node lokamohakanayya
Ava dhairyadi node lokamohakanayya ||2||

Gaganadali samcaripa garudadevane turuga
Jagatidhara sesha pariyanka Sayana
Nigamagocara purandaravithalagallade
Migilada daivagaligi bagyavunte ||3||
***

pallavi

I pariya sobAgava dEvarali nA kANe

anupallavi

gOpIjana priya gOpAlagallade

caraNam 1

doreya tanadali nODe dharaNi dEvige ramaNa siriya tanadali nODe shrIkAntanu
hiriya tanadali nODe sarasijOdbhavanayya guruvu tanadali nODe jagadAdi guruvu

caraNam 2

pAvanadyadi nODe amara gangAjanaka dEvatvadali nODe divijaroDeya
lAvaNyadali nODe lOka mOhakanayya Ava dairyadi nODe asurAntaka

caraNam 3

gaganadali sancaripa garuDa dEvane turaga jagatIdhara shESa paryanka shayana
nigama gOcara purandara viTTalagallade migilAda daivagaLigI bhAgyavuNTe
***

P: E Pariya sobhaGava DevaraoLu naa Kane gopijana Priya gopala gallaDe

C1: Doreyatanadali node dharanidevige ramana siriyatanadali node shrikantanu

Hiriyatanadali node sarasijod bhavanayya guruvutanadali node jagadaadi guruvu

C2: Gaganadali sancharipa garudadevana turaga dharanidhara keshava ananta[paryanka]shayana

Nigama gochara purandharavithala gallade migilaada daivagaligee bhagya unte.
***
 

Meaning: I don’t see this kind(pariya) of behaviour(sobhagava) even in Gods except(allade) in Gopala, who is loved by Gopis.

C1: If kingliness is examined, he is the spouse of Godess of earth In wealth(siriyatana) he is Shrikanta (husband of Goddess of wealth). In seniority (hiriyatana) he is the one who sprung from the oceans, and as a teacher (guruvutana) he is the teacher of all the world.

C2: Except all pervading purandaravithala no other God has such radiance.
*** 

ಈ ಪರಿಯ ಸೊಬಗು ಇನ್ನಾವ ದೇವರಲಿ ಕಾಣೆ ||ಪ||
ಗೋಪೀಜನಪ್ರೀಯ ಗೋಪಾಲಗಲ್ಲದೆ ||ಅ||

ದೊರೆಯತನದಲಿ ನೋಡೆ ಧರಣಿದೇವಿಗೆ ರಮಣ
ಸಿರಿಯತನದಲಿ ನೋಡೆ ಶ್ರೀಕಾಂತನು
ಹಿರಿಯತನದಲಿ ನೋಡೆ ಸರಸಿಜೋದ್ಭವನಯ್ಯ
ಗುರುವುತನದಲಿ ನೋಡೆ ಜಗದಾದಿ ಗುರುವು ||

ಪಾವನತ್ವದಿ ನೋಡೆ ಅಮರಗಂಗಾಜನಕ
ದೇವತ್ವದಲಿ ನೋಡೆ ದಿವಿಜರೊಡೆಯ
ಲಾವಣ್ಯದಲಿ ನೋಡೆ ಲೋಕಮೋಹಕನಯ್ಯ
ಆವ ಧೈರ್ಯದಿ ನೋಡೆ ಅಸುರಾಂತಕ ||

ಗಗನದಲಿ ಸಂಚರಿಪ ಗರುಡದೇವನೆ ತುರಗ
ಜಗತೀಧರ ಶೇಷ ಪರಿಯಂಕಸಯನ
ನಿಗಮಗೋಚರ ಪುರಂದರವಿಠಲಗಲ್ಲದೆ
ಮಿಗಿಲಾದ ದೈವಗಳಿಗೀ ಭಾಗ್ಯವುಂಟೇ ||
********

ರಾಗ :  ಸಾರಂಗಿ   ತಾಳ : ಝಂಪೆ

ಈ  ಪರಿಯ ಸೊಬಗಾವ   
ದೇವರಲಿ   ನಾ ಕಾಣೆ ||       
ಗೋಪೀಜನಪ್ರೀಯ    
ಗೋಪಾಲಗಲ್ಲದೆ ||

ದೊರೆಯತನದಲಿ    ನೋಡೆ   
ಧರಣೀದೇವಿಗೆ   ರಮಣ|
ಸಿರಿಯ ತನದಲಿ   ನೋಡೆ   
ಶ್ರೀ  ಕಾಂತನು||

ಹಿರಿಯ ತನದಲಿ   ನೋಡೆ     
ಸರಸಿಜೊದ್ಭವನಯ್ಯ |
ಗುರುವುತನದಲಿ  ನೋಡೆ    
ಜಗದಾದಿಗುರುವು||

ಪಾವನತ್ವದಿ   ನೋಡೆ    
ಅಮರಗಂಗಾಜನಕ |
ದೇವತ್ವದಿ  ನೋಡೆ   
ದಿವಿಜರೊಡೆಯ||

ಲಾವಣ್ಯದಲಿ   ನೊಡೆ   
ಲೋಕಮೋಹಕನಯ್ಯ |
ಅವ  ಧೈರ್ಯದಿ  ನೋಡೆ   
ಅಸುರಾಂತಕ||

ಗಗನದಲಿ   ಸಂಚರಿಪ   
ಗರುಡದೇವನ   ತುರಗ |
ಜಗವಧರಿಸಿದ   ಶೇಷ    
ಪರ್ಯಂಕಶಯನ  | |

ನಿಗಮಗೋಚರ   ನಮ್ಮ   
ಪುರಂದರವಿಠಲಗಲ್ಲದೆ|
ಮಿಗಿಲಾದ   ದೈವಗಳಿಗೀ  
ಭಾಗ್ಯವುಂಟೆ ||
*****

No comments:

Post a Comment