ಅಸೂರಿ ರಾಮಸ್ವಾಮಿ ಅಯ್ಯಂಗಾರ್ ankita ramadasa
ಏಕೆ ಪೋಗುವೆ ರಂಗಾ, ರಂಗಯ್ಯ ರಂಗ ಪ
ಏಕಾಂತದೊಳು ಪೇಳ್ವ ವಾಕ್ಕುಗಳನು ಕೇಳಿ ಅ.ಪ ಮುನಿಸತಿ ಶಿಲೆಯಾಗಿ ವನಜನಾಭಾಯೆಂದು ನೆನೆಯುತಲಿಲ್ಲವೋ ಮನ ಮೋಹನಾ ತನಯ ಪ್ರಹ್ಲಾದ ತಾ ಜನಕಾ ಬಾರೆನಲಿಲ್ಲ 1
ದುರುಳ ಮಕರಿಯಿಂದೆ ಪರಿತಾಪವಾಂತಿಲ್ಲ ಸ್ಮರಿಸಲಿಲ್ಲ ದುರುಳ ಕದ್ದೊಯ್ಯಲಿಲ್ಲ ಸರಸಿಜಾನನನೀಗ ಚರಣಕೆರಗಲಿಲ್ಲ 2
ಹದಿನಾರು ಸಾವಿರ ಸುದತೀ ಮಣಿಯರೆಲ್ಲ ಮದನಾಂಗ ಬಾರೆಂದು ಕರೆಯಲಿಲ್ಲ ಉದಧಿ ನಿನ್ನರಸಲಿಲ್ಲ ಪದುಳದೆ ಬಲಿ ನಿನ್ನ ಚದುರ ಬಾರೆನಲಿಲ್ಲ 3
ಕರದೆ ಕೊಡಲಿಯ ಪಿಡಿದು ಮರದೆ ನಿ[ಲ್ಲೆನುತಲಿ] ನೂರಾರು ಕೈಯವ ಕರೆಯಲಿಲ್ಲ ಹರನೀಗ ತ್ರಿಪುರರ ತರಿಯೆ ಬಾರೆನಲಿಲ್ಲ ವರತುರುಗವೇರಿ ಧುರಕೆ ಬಾರೆಂಬರಿಲ್ಲ4
ಕಾಮಿತವೀಯೆಂದು ಪ್ರೇಮದಿ ಭಜಿಸುವ ಪಾಮರರಿಲ್ಲಿಗೇ ಬರುತಿರ್ಪರೋ ಶಾಮನೆ ಮಾಂಗಿರಿಗಾಮಿಯಾಗಿಹೆಯೇಕೆ ಕಾಮಹರನೆ ಬಾರೊ ರಾಮದಾಸಜೀವ 5
***
No comments:
Post a Comment