Wednesday, 1 September 2021

ನೀನೇ ನಿನ್ನ ಮರೆದಿಹುದೇನು ಮನವೇ ಸುಜ್ಞಾನದಿಂದ ankita gurumahipati

 ಕಾಖಂಡಕಿ ಶ್ರೀ ಕೃಷ್ಣದಾಸರು


ನೀನೇ ನಿನ್ನ ಮರೆದಿಹುದೇನು ಮನವೇ | ಸುಜ್ಞಾನದಿಂದ ನಿಜವನೀ ನರಿಯಲಿಲ್ಲವೇ ಪ 


ಶ್ವಾನ ಸೂಕರಾದಿ ಅತಿ ಹೀನ ಯೋನಿಯಲಿ ಸುಖದೊಳು | ನಾನಾ ಪರಿಯಲಿ ಬಾಹುದೇನು ಅನುವೇ 1 

ಹರಿವ ಮೃಗಜಲಕ ಬೆಂಬತ್ತಿ ಪೋಪಾ ಹರಿಣನಂತೆ | ಹರಿದು ವಿಷಯ ಕೂಡಾ ಕೆಡುದೇನು ಗುಣವೇ 2 

ನಿನ್ನ ಬಯಕೆಯಂತಾದಡೆ ಮನ್ನಿಸುವ ಅಲ್ಲದಡೆ | ಘನ್ನ ಚಿಂತೆಯೊಳು ಬೀಳುತಿಹುದೇನು ಸುಖವೇ 4 

ನೆನೆದು ತರಿಸು ಮಹಿಪತಿ ಚರಣಾ ಚಿನ್ನ ಕೃಷ್ಣ ನಾ | ತನುವಿನೊಳಗಾಡುತಿಹ ನಿಜ ಮನವೇ 5

***

No comments:

Post a Comment