Wednesday 1 September 2021

ಬಲುಕಷ್ಟ ಬರಗಾಲ ಬಂದಿತಯ್ಯ ಕೊಲುವ ವೈರಿ ಜನಕೆ ಬರಬಾರದಯ್ಯ ankita shyamasundara

 ..

ಬಲುಕಷ್ಟ ಬರಗಾಲ ಬಂದಿತಯ್ಯ

ಕೊಲುವ ವೈರಿ ಜನಕೆ ಬರಬಾರದಯ್ಯ ಪ


ಶಿಶುಗಳಿಗೆ ಹಾಲಿಲ್ಲ ಪಶುಗಳಿಗೆ ಮೇವಿಲ್ಲ

ಉಸರಲು ಬಾಯಿಲ್ಲ ವೃದ್ಧ ಜನಕೇ

ಅಶನ ವಸನಕ್ಕಾಗಿ ವ್ಯಸನ ಪೂರಿತರಾಗಿ

ನಿಶಿ ಹಗಲು ಜನರೆಲ್ಲ ಉಸುರು ಹಾಕುತಲಿಹರು 1


ಧÀವಸಧ್ಯಾನ್ಯದ ಬೆಲೆಯು ದಿವಸ ದಿವಸಕೆ ಮಹಾ

ಪ್ರವಾಹದಂದದಿ ವೃಧ್ಧಿಯಾಗುತಲಿಹುದು

ಅವಸರಕೆ ಬೇಡಿದರೆ ಲವಣದೊರೆಯದು ಮೇಲೆ

ಶಿವಶಿವಾಯೆಂದು ಭವಣಿಯನನುಭವಿಸುವರು 2


ಶಾರೆ ಕಾಳು ಭಿಕ್ಷೆಕೆರೆಯುವದಕೆ ಗತಿಯಿಲ್ಲಾ

ಶರಗೊಡ್ಡಿ ಕರೆದರೂ ಕೊಂಡರೊಬ್ಬರುಯಿಲ್ಲಾ

ಅರೆಹೊಟ್ಟಿಯುಂಡು ಹರಕು ಬಟ್ಟಯನುಟ್ಟ

ಮರಮರನೆ ಮನದೊಳಗೆ ಮರುಗುವರು ಬಡಜನರೂ 3


ಜೋಳನವಣಿ ಸಜ್ಜಿ ಕಾಳಿಗೇರಿದ ಬೆಲೆಗೆ

ತಾಳಿ ಮನದಲಿ ವ್ಯಥಿಯ ಕೂಲಿ ಜನರು

ಕೂಳಿಗಾಗದು ಎಂದು ಬಾಳುವೆಯ ಗೈಯುವಂಥ

ಕೂಲಿವಲ್ಲೆವು ಎನುತ ಗೋಳಿಡುತಲಿಹರು 4


ಕಡಲೆ ಕಾಣದ ಹರಿಯು | ಕಡಲೊಳಡಗಿದ

ಮೃಡನು ಸೊಡರೆಣ್ಣೆಸಿಗದೆಂದು ಸುಡುಗಾಡು ಸೇರಿದಾ

ಅಡಕಿ ಸಕ್ಕರೆ ಗೋಧಿ ಕೊಡುವ ಬೆಲೆಯನು ಕೇಳಿ

ಮಿಡುಕಿ ಮನದೊಳು ಕಣ್ಣ ಬಿಡುತಿಹರು ಸುಮನಸರು 5


ಮಳೆರಾಯ ಮುನಿದುದಕೆ ಹೊಲ ಬೆಳೆಯದಿದ್ದುದಕೆ

ಬಳುತಿಹವು ಬಡಜನರ ಕಣ್ಣಿಂದ ನೀರು

ಜಲಹರಿಸುವದು ನೋಡಿ ನಲಿದಾಡಿ ನಗುತಿಹಳುಕ್ಷಾಮದೇವಿ 6


ಕ್ಷಾಮದೇವಿಗೆ ತನ್ನ | ಧಾಮಸೇರುವಂತೆ ನೀಡಿ ಮಾಡಿ ಸಾಕು

ನಮ್ಮ ಸಕಲ ಜನಕೇ |

ಕ್ಷೆಮ ಸೌಖ್ಯವಗರೆದು | ಪ್ರೇಮದಲಿ ಪೊರೆ

ಕರವ ನಾ | ಮುಗಿದು ಪ್ರಾರ್ಥಿಸುವೆ ಶಾಮಸುಂದರ ಸ್ವಾಮಿ 7

***


No comments:

Post a Comment