..
kruti by shreeshapranesha vittala dasaru
ಶ್ರೀಫಲಮಾರು ಕೃಷ್ಣಣ್ಣನವರಿಗೆ ಅಂಕಿತಪದ
ಇಂದಿರೇಶ ವಿಠಲರಾಯ ಆ |ನಂದದೀಯೋ ಭಕುತಗೆ ಜೀಯ್ಯಾ ಪ
ನಿನ್ನ ನಾಮ ಸ್ಮøತಿ ಒದಗಲಿ ಪಾ |ವನ್ನ ಮತದೀ ನಡೆಯಲೀ |ನಿನ್ನ ಕಥೆಗಳ ಕೇಳಲಿ ಪ್ರ |ಪನ್ನರ ಸಹವಾಸವಾಗಲಿ 1
ಅನ್ಯ ದೈವಂಗಳ ನೋಡದೆ ಮ |ತ್ತನ್ಯ ಶಾಸ್ತ್ರಂಗಳೋದದೇ ||ಅನ್ಯರನು ಕೊಂಡಾಡದೇ ಹರಿ |ನಿನ್ನನೇ ನೋಡಿ ಹಿಗ್ಗುವದೇ 2
ಶ್ರೀಶ ಪ್ರಾಣೇಶ ವಿಠ್ಠಲರೇಯಾ ದು |ರಾಶಿ ಎಂಬುದು ನೀ ಬಿಡಿಸಯ್ಯಾ ||ಲೇಸಾಗಿ ಇವನೆ ಬೇಡುವನಯ್ಯಾ ನೀ |ಮೀಸಲ ಮನವಿತ್ತು ಸಲಹಯ್ಯಾ 3
***
No comments:
Post a Comment