Thursday, 5 August 2021

ಎಂದೆಂದಿಗೂ ಕುಂದದೆ ಸಲಹು ಎನ್ನ ankita rukmesha

 ..

kruti by rukmangadaru

ಎಂದೆಂದಿಗೂ ಕುಂದದೆ ಸಲಹು ಎನ್ನ ಪ


ಮಂದರಧರಸುರ ನರ ಹರಿಯೇಇಂದಿರೆಯರಸರವಿಂದ ಲೋಚನಮಂದನು ನಾನೆಂದರಿಯೆ ಅ.ಪ


ಶಿರಿಗರುವದ ಭರದಿಂದ ಬರಸಿ |ಅನ್ಯರೊಳಿರಲು ಬಲು ನಾ ಚರಿಸಿ |ಶಿರಿಕರ ಕರಿವರ ವರದನ ವಿರುದ್ಧವ |ನಿರುವರ ನೆರೆಯಲಿ ಮೆರಿಸಿ 1

ಕರುಣಾಘನ ಕರುಣಾಲಯ ವರ್ಣ ಸು - |ಪರ್ಣಯಾನ ಯದುಕುಲ ಮಣಿಯೇ ||ಶರಣಾಗತ ಪರಿಪಾಲಿಪನೆಂದು |ಪರಿಪರಿ ಪಾಡುತ ನಾ ದಣಿಯೆ 2

ಬೇರಾಗಿರುವಾರರಿಗಳನಾರಿಸಿ ತರಿಸಿ |ಬಿರುಸುತನದಲಿ ಬಿಡಿಸಿ ||ನಾರಾಯಣ ಭವ ಭಯ ಮುರಿವದುಚಿತ |ಮರೆಯದೆ ರುಕ್ಮನ ಭವ ಬಿಡಿಸಿ3

***


No comments:

Post a Comment