Thursday, 5 August 2021

ಮೊದಲಿಗೆ ಶ್ರೀ ಯಮಧರ್ಮ ತನಯೆಶ್ರೀ ankita bhupati vittala

..

kruti by bhupati vittalaru ( kakhandaki Ramacharyaru) 


ಮೊದಲಿಗೆ ಶ್ರೀ ಯಮಧರ್ಮ ತನಯೆಶ್ರೀ ಕೃಷ್ಣನಂಗದಿಂದ ಜನಿಸಿದಳುಕಮಲಸಂಭವನ ಲೋಕದೊಳಗಿದ್ದುಕೃಷ್ಣ ಕೃಷ್ಣೆ ಎಂದೆನಿಸಿದಳು 1

ಸುಮನಸರೆಲ್ಲರು ಪ್ರಾರ್ಥನೆ ಮಾಡಲುಕೈಲಾಸಕೆ ದಯಮಾಡಿದಳುಆ ಮಹಾದೇವನ ಜಟಾಜೂಟದಿಂಸಹ್ಯಾದ್ರಿಗೆ ಬಂದಿಳಿದಿಹಳು 2

ಮುಂದೆ ಮುಂದೆ ತಾ ಸಾಗಿಬರತಿರಲುವೇಣಿನದಿಯು ಬಂದು ಕೂಡಿದಳುಕೃಷ್ಣ ವೇಣಿಗಳ ಸಂಗಮವಾಗಲುಕೃಷ್ಣವೇಣಿ ಎಂದೆನಿಸಿದಳು 3

ಕೃಷ್ಣವೇಣಿ ಹರಿದಂಥ ಸ್ಥಳಗಳುಋಮುನಿಗಳು ತಪವ ಗೈದಿಹರುಋಮುನಿಗಳು ತಪವ ಗೈದಕ್ಷೇತ್ರಗಳುಪುಣ್ಯಕ್ಷೇತ್ರ ವೆಂದೆನಿಸಿದವು 4

ಗಾಲವೃಗಳು ತಪವಗೈದಸ್ಥಳಗಾಲವಕ್ಷೇತ್ರವು ಗಲಗಲಿಯುಗಲಗಲಿಯಲ್ಲಿಯ ಚಕ್ರತೀರ್ಥರ ಋಬಂಡಿಗಳೇ ಗಾಲವರ ಆಶ್ರಮವು 5

ಗಾಲವಕ್ಷೇತ್ರದ ಪಂಚಕೋಶವುಪುಣ್ಯಭೂಮಿ ಎಂದೆನಿಸುವದುಗಾಲವಗಳ ಪುಣ್ಯದ ಬಲವೇಗಲಗಲಿಯ ಕೀರ್ತಿಗೆ ಕಾರಣವು 6

ಗಾಲವೃಗಳ ನಂಬಿದ ಜನರಿಗೆಭೂಪತಿವಿಠ್ಠಲ ಒಲಿಯುವನುಗಾಲವೃಗಳ ಮರೆತುಬಿಟ್ಟರೆನಷ್ಟವಾಗುವದು ಗಲಗಲಿಯು 7

***


No comments:

Post a Comment