..
kruti by ವಿಶ್ವೇಂದ್ರತೀರ್ಥರು vishwendra teertharu sode mutt
ವೇದವೇದ್ಯರ ವಂದಿಸುವೆನು
ವಾದಿರಾಜರ ಪ್ರಿಯ ಶಿಷ್ಯರ
ವೇದವೇದ್ಯರ ವಂದಿಸುವೆನು ಪ
ವಾದಿರಾಜರ ಪಾಶ್ರ್ವದಲ್ಲಿಹ
ವಾದಿಗಳ ದುರ್ವಾದ ಕೆಡಿಸಿದ
ಮಧ್ವಶಾಸ್ತ್ರವನುದ್ಧರಿಸಿದ
ವೇದನಿಧಿಗಳ ತಾತರಾಗಿಹ 1
ರೂಪ್ಯಪೀಠದಿ ಕೃಷ್ಣಮಂದಿರ
ರೂಪಳಿದುದನುದ್ಧಾರ ಮಾಡಿದ
ಪಾಪರಹಿತರ ಕೋಪಶೂನ್ಯ ಸೋ-
ದಾಪುರದೊಳಗೆ ಇರ್ಪ ಯತಿಗಳ 2
ಯಾದವೇಶ ರಾಜೇಶ ಹಯಮುಖ
ಪಾದಕಮಲವ ಬಿಡದೆ ಸ್ಮರಿಸುವ
ಸಾಧುಜನರಿಗಾಧಾರರಾಗಿಹ
ವಾದಿರಾಜರ ಪದದೊಳಿರ್ಪರ 3
***
No comments:
Post a Comment