Saturday, 4 December 2021

ನನ್ನವ್ವ ಕಲ್ಲ ಬಿಡೆ ಈ ಧೋತ್ರವಚೆನ್ನಾಗಿ ಒಗೆಯಬೇಕು ankita neleyadikeshava NANNAVVA KALLA BIDE EE DHTRAVA CHENNAAGI OGAYABEKU



ನನ್ನವ್ವ ಕಲ್ಲ ಬಿಡೆ ಈ ಧೋತ್ರವಚೆನ್ನಾಗಿ ಒಗೆಯಬೇಕು ಪ


ಮುನ್ನ ಮಾಡಿದ ಪಾಪ ಕರ್ಮ ಹೋಗುವ ಹಾಗೆಚೆನ್ನಕೇಶವನ ಪ್ರಸಾದಕ್ಕೊದಗಬೇಕು ಅ


ಉಟ್ಟ ಧೋತ್ರವು ಮಾಸಿತು - ಮನದೊಳಗಿರುವದುಷ್ಟರೈವರುಗಳಿಂದ ಕಷ್ಟ ದುರಿತಗಳುಬಿಟ್ಟು ಹೋಗುವ ಹಾಗೆ ಮುಟ್ಟಿ ಜಲದೊಳುಗಟ್ಯಾಗಿ ಒಗೆಯಬೇಕು 1


ವೇದವನೋದಬೇಕು ಮನದೊಳಗಿದ್ದಭೇದವ ಕಳೆಯಬೇಕುಸಾದರಣೆಯಿಂದ ತಿಳಿದು ನಿಶ್ಚಯವಾಗಿಕ್ರೋಧಕರ್ಮಗಳೆಲ್ಲ ಬಿಟ್ಟು ಹೋಗುವ ಹಾಗೆ 2


ವೇಲಾಪುರದ ಚೆನ್ನಕೇಶವನ ಸೇವೆಗೆಆಲಸ್ಯವನು ಮಾಡದೆಕೋಲ ಹಿಡಿದು ದ್ವಾರಪಾಲಕನಾಗುವೆನೀಲ ಕುಂತಳೆ ಕಲ್ಲ ಬಿಟ್ಟು ಆ ಕಡೆ ಸಾರೆ 3

***

No comments:

Post a Comment