Saturday 4 December 2021

ನರಸಿಂಹ ವಜ್ರಸಿಂಹ ಸರಸಿಜನಾಭಾ ದಕ್ಷಿಣ ankita vijaya vittala NARASIMHA VAJRASIMHA SARASIJANAABHA DAKSHINA



.ನರಸಿಂಹ ವಜ್ರಸಿಂಹ
ಸರಸಿಜನಾಭ ದಕ್ಷಿಣ ಶರಧಿನಿವಾಸಾ ||ಪ|| 

ಹಿರಣ್ಯಕಶ್ಯಪು ತಾ ಪ್ರಹ್ಲಾದನಾ ಬಾಧಿಸಲು 
ಪರಿಯ ದೈವವೆ ಮೊರೆಹೋಗಲೂ 
ಹಿರಿದಾಗಿ ಕೇಳಿ ಹಿತದಲಿ ಬಂದು ಬೊಬ್ಬಿಡಲು 
ಹಿರಣ್ಯಗರ್ಭಾದಿಗಳು ಹಿರಿದು ಚಿಂತಿಸಲೂ ||೧||

ಭುಗಿಲೆನೆ ಧಿಗಿಲೆನೆ ದಿಕ್ಕಿನೆಲಿ ಪ್ರತಿ ಶಬ್ದ 
ಪುಟ್ಟಿತಿರೆ ಪಗಲಿರಳು ಒಂದೆಂದರು ಸಕಲರೂ 
ಝಗಝಗಿಪ ಬೆಳಗು ಕವಿದುದು ಮೂರು ಲೋಕಕ್ಕೆ
ಉಗುರು ಕೊನೆ ಪೊಗಳಿ ವೇದಗಳು ಬೆರಗಾಗಿ ||೨|| 

ರಕ್ಕಸ ನೋಡಲು ಬಗೆದು ಕರುಳು ಕೊರಳಿಗೆ ಮಾಲೆ 
ಇಕ್ಕಿ ಭಕ್ತಗೆ ಮೆಚ್ಚಿ ವರವನಿತ್ತಾ 
ಕಕ್ಕಸದ ದೈವ ಅನಂತ ಪದುಮನಾಭ 
ಮುಕ್ತಿದಾಯಕ ವಿಜಯವಿಠಲ ಮಹದಾ ||೩||
***

Narasimha vajrasimha
Sarasijanaba dakshina saradhinivasa ||pa||

Hiranyakasyapu ta prahladana badhisalu
Pariya daivave moreyogalu
Hiridagi keli hitadali bandu bobbidalu
Hiranyagarbadigalu hiridu chintisalu ||1||


Bugilene dhigilene dikkineli prati Sabda puttitire
Pagaliralu ondendaru sakalaru
Jagajagipa belagu kavidadu muru lokakke
Uguru kone pogali vedagalu beragagi ||2||

Rakkasa nodalu bagedu karulu koralige male
Ikki Baktage mecci varavanitta
Kakkasada daiva ananta padumanaba
Muktidayaka vijayaviththala mahada||3||
***

Narasinha vajrasinha
sarasijanabha dakshina sharadhinivasa ||pa|| 

Hiranyakashyapu ta prahladana badhisalu 
pariya daivave morehogalu 
hiridagi keli hitadali bandu bobbidalu 
hiranyagarbhadigalu hiridu chintisalu ||1||

Bhugilene dhigilene dikkineli prati shabda 
puttitire pagaliralu ondendaru sakalaru 
jhagajhagipa belagu kavidudu muru lokakke
uguru kone pogali vedagalu beragagi ||2|| 

Rakkasa nodalu bagedu karulu koralige male 
ikki bhaktage mechchi varavanitta 
kakkasada daiva ananta padumanabha 
muktidayaka vijayavittala mahada ||3||
***
ನರಸಿಂಹ ವಜ್ರಸಿಂಹ 
ಸರಸಿಜನಾಭಾ ದಕ್ಷಿಣ ಶರಧಿನಿವಾಸಾ ||ಪ||

ಹಿರಣ್ಯಕಶ್ಯಪು ತಾ ಪ್ರಹ್ಲಾದನಾ ಬಾಧಿಸಲು
ಪರಿಯ ದೈವವೆ ಮೊರೆಯೋಗಲೂ
ಹಿರಿದಾಗಿ ಕೇಳಿ ಹಿತದಲಿ ಬಂದು ಬೊಬ್ಬಿಡಲು
ಹಿರಣ್ಯಗರ್ಭಾದಿಗಳು ಹಿರಿದು ಚಿಂತಿಸಲೂ ||1||

ಭುಗಿಲೆನೆ ಧಿಗಿಲೆನೆ ದಿಕ್ಕಿನೆಲಿ ಪ್ರತಿ ಶಬ್ದ ಪುಟ್ಟಿತಿರೆ
ಪಗಲಿರಳು ಒಂದೆಂದರು ಸಕಲರೂ 
ಝಗಝಗಿಪ ಬೆಳಗು ಕವಿದದು ಮೂರು ಲೋಕಕ್ಕೆ
ಉಗುರು ಕೊನೆ ಪೊಗಳಿ ವೇದಗಳು ಬೆರಗಾಗಿ ||2||

ರಕ್ಕಸ ನೋಡಲು ಬಗೆದು ಕರುಳು ಕೊರಳಿಗೆ ಮಾಲೆ
ಇಕ್ಕಿ ಭಕ್ತಗೆ ಮೆಚ್ಚಿ ವರವನಿತ್ತಾ
ಕಕ್ಕಸದ ದೈವ ಅನಂತ ಪದುಮನಾಭ
ಮುಕ್ತಿದಾಯಕ ವಿಜಯವಿಠ್ಠಲ ಮಹದಾ ||3||
***



No comments:

Post a Comment