Saturday, 4 December 2021

ಶ್ರೀನರಸಿಂಹದೇವ ಶರಣಾಗತ ರಕ್ಷಕನೆ ankita helavana katte SHREE NARASIMHADEVA SHARANAAGATA RAKSHAKANE






ಶ್ರೀ ನರಸಿಂಹದೇವ ಶರಣಾಗತ ರಕ್ಷಕನೆ ।

ದಾನವಾರಿ ಸುಭಕ್ತಾಧೀನ ಮೂರುತಿಯೆ ।। ಪಲ್ಲವಿ ।।


ಹರಿ ತನ್ನ ದೈವವೆಂದು ಸ್ಮರಿಸುತಿರಲು ಬಾಲ ।

ನಿರವ ಕಾಣದೆ ದುಷ್ಟ ಹಿರಣ್ಯಾಕಾಸುರನು ।

ಪರಿ ಪರಿ ಹಿಂಸಿಸೆ ಮೊರೆದು ಕೋಪದೊಳೆದ್ದು ।

ತರಳಗೊಲಿದೆ ಬಹು ಕರುಣಾನಿಧಿಯೇ ।। ಚರಣ ।।


ಛಿಟಿಛಿಟಿಲೆಂದಾರ್ಭಟಿಸಿ ಕಂಭವು ಸಿಡಿಯೇ ।

ಕಟಿಕಟಿ ಮಸೆದಗ್ನಿ ನಿಟ್ಟುಸಿರಿನಿಂ ಹಲ್ಗಳ ।

ಕಟಕಟ ಕಡಿವುತುಬ್ಬನ ತೋರಿ ನಿಂದ ।

ಕಠಿಣ ಮೂರುತಿಯೇ ।। ಚರಣ ।।

ಕೊಬ್ಬಿದ ಹಿರಣ್ಯಕನೊಬ್ಬ ಮುರಿವೆನೆಂದು ।

ಹೆಬ್ಬಾಗಿಲೊಳು ಸಂಜೆ ಮಬ್ಬಿನಲಿ ದನುಜನ ।

ಗರ್ಭವ ನಖದಿಂದ ಇಬ್ಭಾಗವನು ಮಾಡಿ ।

ಹೆಬ್ಬಿದ ಕರುಳನು ಹರುಷದಿ ಧರಿಸಿದೆ ।। ಚರಣ ।।


ಭೀತರಾದ ಸುರವ್ರಾತ ಪ್ರಾರ್ಥಿಸೆ ಬಹು ।

ಪ್ರೀತಿಯ ಭಕ್ತನ ಮಾತನು ಮನ್ನಿಸಿ । ಅತಿ ।

ಶಾಂತನಾಗಿ ಸಂತೋಷ ಪಡಿಸಿದ । ಆ ।

ನಾಥ ರಕ್ಷಕನೇ ಕಾತರವಳಿದೆ ।। ಚರಣ ।।


ಖಳನ ಮರ್ದಿಸಿ ಬಹು ಇಳೆಯ ಪಾಲಿಸಿದೆ ।

ನಳಿನ ಸಂಭವಗೆ ಬಲು ಹರುಷವನಿತ್ತೆ ।

ಹೆಳವನಕಟ್ಟೆ ಶ್ರೀ ರಂಗ ದ್ಯಾಗಿನಗಟ್ಟೆ ।

ನೆಲೆವಾಸ ಕಂಬದ ನರಸಿಂಹದೇವಾ ।। ಚರಣ ।।

***


ರಾಗ : ಧನ್ಯಾಸಿ ತಾಳ : ಮಿಶ್ರಛಾಪು (raga tala may differ in audio)


Sri narasimhadeva saranagata rakshakane |

Danavari subaktadhina murutiye || pallavi ||


Hari tanna daivavendu smarisutiralu bala |

Nirava kanade dushta hiranyakasuranu |

Pari pari himsise moredu kopadoleddu |

Taralagolide bahu karunanidhiye || 1 ||


Citicitilendarbatisi kambavu sidiye |

Katikati masedagni nittusirinim halgala |

Katakata kadivutubbana tori ninda |

Kathina murutiye || 2 ||


Kobbida hiranyakanobba murivenendu |

Hebbagilolu sanje mabbinali danujana |

Garbava nakadinda ibbagavanu madi |

Hebbida karulanu harushadi dhariside || 3 ||

***


ಶ್ರೀ ನರಸಿಂಹದೇವ ಶರಣ ರಕ್ಷಕನೆ

ದಾನವಾರಿ ಸುಭಕ್ತಾಧೀನ ಮೂರುತಿಯೆ ಪ.


ಹರಿ ತನ್ನ ದೈವವೆಂದು ಸ್ಮರಿಸುತಿರಲು ಬಾಲ

ನಿರವ ಕಾಣದೆ ದುಷ್ಟಹಿರಣ್ಯಕಾಸುರನು

ಪರಿ ಪರಿ ಹಿಂಸಿಸೆ ಮೊರೆದು ಕೋಪದೊಳೆದ್ದು

ತರಳಗೊಲಿದೆ ಬಹು ಕರುಣಾನಿಧಿಯೆ 1


ಛಿಟಿ ಛಿಟಿಲೆಂದಾರ್ಭಟಿಸಿ ಕಂಬವು ಸಿಡಿಯೆ

ಕಟಿ ಕಟಿ ಮಸಿದಗ್ನಿ ನಿಟ್ಟುಸಿರಿನಿಂ ಹಲ್ಗಳ

ಕಟಿ ಕಟಿ ಕಡಿವುತುಬ್ಬಸ ತೋರಿ ನಿಂದ

ಕಠಿಣ ಮೂರುತಿಯೆ 2


ಕೊಬ್ಬಿದ ಹಿರಣ್ಯಕನುಬ್ಬ ಮುರಿವೆನೆಂದು

ಹೆಬ್ಬಾಗಿಲೊಳು ಸಂಜೆ ಮಬ್ಬಿನಲಿ ಧನುಜನ

ಗರ್ಭವ ನಖದಿಂದ ಇಬ್ಭಾಗವನು ಮಾಡಿ

ಹಬ್ಬಿದ ಕರುಳನು ಹರುಷದಿ ಧರಿಸಿದೆ 3


ಭೀತರಾದ ಸುರವ್ರಾತ ಪ್ರಾರ್ಥಿಸೆ ಬಹು

ಪ್ರೀತಿಯ ಭಕ್ತನ ಮಾತನು ಮನ್ನಿಸಿ ಅತಿ

ಶಾಂತನಾಗಿ ಸಂತೋಷಪಡಿಸಿದ ಅ-

ನಾಥ ರಕ್ಷಕನೆ ಕಾತರವಳಿದೆ 4


ಖಳನ ಮರ್ದಿಸಿ ಬಹು ಇಳೆಯ ಪಾಲಿಸಿದೆ

ನಳಿನ ಸಂಭವಗೆ ಬಲು ಹರುಷವನಿತ್ತೆ

ಹೆಳವನಕಟ್ಟೆ ಶ್ರೀ ರಂಗ ದಾಗಿನಕಟ್ಟೆನೆಲೆವಾಸ ಕಂಬದ ನರಸಿಂಹದೇವ 5

***

No comments:

Post a Comment