Wednesday, 1 September 2021

ಇಂದು ಧರಿಯೊಳು ಬ್ರಹ್ಮಾನಂದವನು ತುಂಬಿ ತುಳುಕತಿ ankita mahipati

 ಕಾಖಂಡಕಿ ಶ್ರೀ ಮಹಿಪತಿರಾಯರು


ಇಂದು ಧರಿಯೊಳು ಬ್ರಹ್ಮಾನಂದವನು ತುಂಬಿ ತುಳುಕತಿಹ್ಯಾನಂದಮಯ ಕಾಯದೊಳು ಕೌತುಕವು ನಾದಬಿಂದು ಕಳಿಯಲಿ ಸ್ತುತಿಸಲೆನ್ನಳವಲ್ಲ ಕ್ಷಿತಿಯೊಳು ಘನಮಹಿಮೆ ಅತಿಹರುಷವನು ದೋರುತಿಹ್ಯ ಸದ್ಗತಿ ಸುಖವು ಗುರುದಾಸರು 1 
ಓಂಕಾರ ಮೊದಲಾದ ಶ್ರುತಿವೇದ ಘೋಷಗಳು ಧಿಮಿಧಿಮಿಸುವ ಮಹಾಶಬ್ದಗಳು ವಾದ್ಯಗಳು ಕೇಳುವದು ನೀದೃಶ್ಯೆಲಿ ಗರ್ಜಿಸುವ ಭೃಂಗಿಶಂಖನಾದ ಧ್ವನಿಯಗಳು ಭೋರಿಡುವ ಭೇರಿ ಮೃದಂಗ ವೇಣಿಯಗಳು ಚಿಣಿ ಚಿಣಿ ತಂತ್ರ ಮೊದಲಾದ ಸಂಕಾರಗಳು ಕೇಳಿ ಪಾವನವಾದೆನು 2 
ಬೆರೆದು ನೋಡಲು ಅಂತರಾತ್ಮದೊಳು ಪ್ರಭೆಯಗಳು ಥಳಥಳಿಸುವಾ ಮಹಾತೇಜಗಳು ಪುಂಜಗಳು ಹೇಳಲಿನ್ನೇನದ ಹೊಳವಗಳು ಸುಳವಗಳು ನೋಡುವದು ಅನಿಮಿಷದಲಿ ರವಿ ಶಶಿ ತಾರೆಗಳು ಸೂಸುತಿಹ್ಯ ಕಿರಣಗಳು ಭಾಸಿಸುವ ನಾನಾವರ್ಣಗಳು ಛಾಯಗಳು ಬೆರಗಾದೆÀನಿಂದ 3 
ವರ್ತಿಸುತ್ತಲಿಹ ಪ್ರವೃತ್ತಿ ನಿವೃತ್ತಿಗಳು ಅಂತರಾತ್ಮದ ವಾಯುಸ್ತುತಿಯಗಳು ಗತಿಯಗಳು ತಿಳಿವದೀ ಪ್ರಣಮ್ಯಲಿ ಸೂಸುತಿಹ ಶ್ವಾಸವುಚ್ಛ್ವಾಸನಿಯ ಭಾಸಿಗಳು ಶೋಭಿಸುವ ಜೀವನದ ಮಂತ್ರ ಸರ ಮಾಲೆಗಳು ಪಾವನವಾದೆನು 4 
ಕರದ್ವಯಂ ಮುಗಿದು ವರಗುರುಚರಣಕಮಲಕಿ ನ್ನೆರಗಿ ಪರಮಾನಂದ ಹರುಷದಿ ಶಿರಸದಿ ಶ್ರೀಗುರುಮೂರ್ತಿಯ ನೆನೆವೆನು ಸದ್ಭಾವದಿಂದ ಸದ್ಗುರು ಪಾದಮಂಪಿಡಿದು ಸದ್ಬ್ರಹ್ಮರಸದೊಳು ಮುಳುಗಿ ಸದ್ಭಕ್ತಿಯಲಿ ಸದ್ಗತಿ ಸಾಧನವು ಸಾಧಿಸಿಹ್ಯ ಮಹಿಪತಿಯು ] ಶ್ರೀ ಗುರುಕೃಪೆಯಲಿನ್ನು 5
***

No comments:

Post a Comment