ಕಾಖಂಡಕಿ ಶ್ರೀ ಕೃಷ್ಣದಾಸರು
ಇಂದು ನಂದ ಕಂದ ಮುಕ್ಕುಂದನಾ| ಬಂದು ವದಗಿಹ ಬಹಳ ಪುಣ್ಯದಿ ಛಂದವಾಯಿತು ಚಲುವನಂಘ್ರಿಯ ಪ
ಬಲಿಗೆ ಭೂಮಿಯ ಬೇಡಿ ಹೆಜ್ಜೆಯಾ| ಅಳತೆಯರಡಲಿ ಅಡಗಿಸಿ| ನಳಿನ ಜಾಂಡಕ ಸಖವ ಸೋಂಕಿಸಿ| ಸುರನದಿ ಪಡೆದ ನಂಘ್ರಿಯಾ 1
ಶಿಲೆಯು ಆಗಿರೆ ಶಾಪದಲಿ ಸೋಂ| ಕಲು ನಿಜಾಂಗದ ಕಾಣಿಸಿ| ನಲಿದು ಕಾಳೀಂದಿಯೊಳುರುಗನಾ| ತಲೆಯಳಾಟದಿ ತುಳಿದ ನಂಘ್ರಿಯಾ 2
ಮುನಿಜನ ಹೃದಯ ಮನೆಯ ದೀಪವು| ಯನಿಪ ಶ್ರೀದೇವಿ ಯರಸನಾ| ಮನದಿಗುರುವರ ಮಹಿಪತಿ ಪ್ರಭು| ನೆನೆವವರೊಳಗೆ ನೆಲೆಸಿಹನ ಪದ 3
***
No comments:
Post a Comment