Wednesday, 1 September 2021

ನಂಬಿದವರ ಕಾವ ದೈವ ಅಂಬುಜಾಕ್ಷನೀತನೆಂದು ankita mahipati

 ನಂಬಿದವರ ಕಾವ ದೈವ ಅಂಬುಜಾಕ್ಷನೀತನೆಂದು ಧ್ರುವ 


ನಂಬಿದ ಪ್ರಲ್ಹಾದಗ ತಾಂ ಸ್ತಂಭದೊಳು ಮೂಡಿ ಬಂದು ಹಂಬಲಿಸಿ ದಲ್ಲ್ಯೊದಗಿ ಇಂಬವಾದನೀತನೆಂದು 1 

ನಾಮ ನಂಬಬಾರದೆ ನೀ ಕಾಮಧೇನುವೆಂದು ಪೂರ್ಣ ನೇಮದಿಂದ ಸಲಹುತಿಹ್ಯ ಸ್ವಾಮಿ ಸರ್ವೋತ್ತಮನೆಂದು 2 

ದೀನ ಮಹಿಪತಿಸ್ವಾಮಿ ಭಾನುಕೋಟಿತೇಜಪೂರ್ಣ ಮನದಪೇಕ್ಷೆ ಪೂರೈಸುವ ಘನಸುಖದಾಯಕನೆಂದು 3

***


No comments:

Post a Comment