ಕಾಖಂಡಕಿ ಶ್ರೀ ಕೃಷ್ಣದಾಸರು
ಹರಿದಾಸನವನೇ ನೋಡಿ| ಬರೇ ವೇಷ ದೋರಲ ಬೇಡಿ ಪ
ಒಂದರ ಘಳಗೆಯ ಕುಂದದಿ ಕಳೆಯಾ|ಮು| ಕುಂದನ ನಾಮವ ಛಂದದಲಿಹ 1
ಅನ್ಯರ ದೂಷಿಸಿ ತನ್ನನೇ ಹೊಗಳನು| ಸಣ್ಣ ದೊಟ್ಟದರಲಿ ಘನ್ನರಿತಿಹ 2
ಹುಲ್ಲ ಮನುಜರಿಗೆ ಹಲ್ಲವದೆರಿಯದೆ| ಫುಲ್ಲನಾಭನಪದದಲಿಹ ಮನ 3
ಮುಂದಿನ ಹಾನಿಯು ಇಂದಿವೆ ತೋರಲಿ| ಮುಂದಿಟ್ಟಟಡಿಯನು ಹಿಂದಕೆಳೆಯ 4
ನುಡಿವದು ಸಲಭ ನಡೆವುದು ದುರ್ಲಭ| ನಡೆನುಡಿಯಲಿ ಸಮಧೃಡಗಂಡಿಹ 5
ಹಂಗವಳಿದು ಸತ್ಸಂಗದಿ ಶ್ರವಣದಿ| ಕಂಗಳ ಸಿರಿಸುಖ ಮಂಗಳಲಿಹ 6
ತಂದೆ ಮಹಿಪತಿ ನಂದನ ಪ್ರಭುದಯ| ದಿಂದ ಭವಾಲಯ ಸಂದ ಜರಿದ 7
***
No comments:
Post a Comment