RAO COLLECTIONS SONGS refer remember refresh render DEVARANAMA
ಕಾಖಂಡಕಿ ಶ್ರೀ ಕೃಷ್ಣದಾಸರು
ಹರಿ ಹರಿಯೆಂದು ಸ್ಮರಿಸೆಲೋ ಪ್ರಾಣಿ ಪ
ಹರಿ ಹರಿ ಯೆಂದು ಸ್ಮರಿಸೆಲೋ ಪ್ರಾಣೀ | ಹರಿಸುವ ಬಂಧ ಸಾರಂಗ ಪಾಣಿ 1
ನರಜನ್ಮದಲಿ ಬಂದು ನೀ ಮುಂದುಗಾಣೀ | ಮರೆದು ತನಗ ತನ್ನ ಮಾಡುವರೇ ಹಾನಿ 2
ತರುಣೋಪಾಯ ದೋರುವ ಮೊರೆಹೊಕ್ಕರೆ ನೀ | ಗುರುಮಹಿಪತಿ ಸ್ವಾಮಿ ನಿಜ ಸುಖದಾನಿ 3
***
No comments:
Post a Comment