Wednesday, 1 September 2021

ಕೇಳು ಕಂಡ್ಯಾ ಒಂದು ಮನವೇ ಕೇಳು ಕಂಡ್ಯಾ ankita mahipati

 ಕೇಳು ಕಂಡ್ಯಾ ಒಂದು ಮನವೇ | ಕೇಳು ಕಂಡ್ಯಾ ಪ 


ಕೇಳು ಕಂಡ್ಯಾ ವಂದ | ಪ್ರೇಮ ಭಾವದಿಂದ ಬಾಳು ದೀಪರಿಂದ ನಿನಗೆ ಬಂದಕೀದೆ ಛಂದ 1 

ವಿಡಿದು ಗುರುಪಾದಾ ಪಡಿಯೋ ನಿಜಬೋಧಾ | ಕಡಿದು ಕಾಮ ಕ್ರೋಧ | ನೀಗು ವ್ಯವಾಧಾ 2 

ಅನ್ಯ ಮಾರ್ಗ ನೋಡಾದಿರುವ ಬಲಿದೃಢಾ | ಘನಗುರು ಗೂಢಾ | ವಿದ್ಯೆ ಸಾಧಿಸೆಲೋ ಮೂಢ 3 

ದೊಡ್ಡವ ನಾನೆಂಬ ದೋರದೆÉ ನೀಡಂಭ | ಜಡ್ಡಾಗದೇ ಗುಂಭಿ | ನಿಜ ನೋಡಿ ನಿರಾಲಂಬ 4 

ಮಹಿಪತಿ ಜನಸೊಲ್ಲ ಹಾದಿಯಂತಿದಲ್ಲ ಮಹಿಮನೇ ಬಲ್ಲನಿದರ ಸವಿಸುಖವೆಲ್ಲ 5

***


No comments:

Post a Comment