Wednesday, 1 September 2021

ನಿನಗಿನ್ನ ನಾನಧಿಕ ಇಂದಿರೇಶಾ ಎನಗೆ ನಾಥನು ಉಂಟು ಅನಾಥನು ನೀನು ankita gurujagannatha vittala

 ..

ನಿನಗಿನ್ನ ನಾನಧಿಕ ಇಂದಿರೇಶಾ ಎನಗೆ ನಾಥನು ಉಂಟು ಅನಾಥನು ನೀನು ಪ 


ಕುಲಗೋತ್ರ ನಿನಗಿಲ್ಲ ಕುಲಗೋತ್ರ ಎನಗುಂಟು ಲಲಿತರೂಪನು ನಾನು ಅ


ರೂಪ ನೀನೂ ಚೆಲುವ ಸುಗುಣಿಯು ನಾನು ಅಗುಣರೂಪನು ನೀನು ಬಲಹೀನನು ನೀನು ಸಬಲ ನಾನು ದೇವಾ 1 


ನಾಮಧೇಯನು ನಾ ಅನಾಮಧೇಯನು ನೀನು ಕಾಮಕಾಮುಕ ನಾ ಅಕಾಮಿ ನೀನು ಪಾರನು ನಾ ಅಪಾರನು ನೀನಯ್ಯಾ ನೇಮಬದ್ಧನು ನಾ ಅನೇಮಿ ನೀನು 2 


ಗತಿಯು ನೀನೆಗೈಯ್ಯ ಸದ್ಗತಿಯು ನಿನಗಾರಯ್ಯ ವ್ರತನೇಮ ಎನಗುಂಟು ನಿನಗಾವುವೋ ಸತತಮಾನಿಯು ನಾನು ಅಮಾನಿ ನೀನಯ್ಯ ವಿತತಕರ್ಮಿಯು ನಾನು ಕರ್ಮಹೀನನು ನೀನು 3 


ಪತಿತಪಾತಕಿ ನಾನು ಪತಿತಪಾವನನು ನೀನು ರತಿಬದ್ಧನು ನಾ ವಿರತಿಯು ನೀನು ಶ್ರೀತಜನರಪಾಲ ಆಶ್ರಿತ ನಾನು ನಿನಗೈಯ್ಯ ಸತತಪಾಲಕ ನೀನು ಪಾಲ್ಯ ನಾನು 4 


ದೂತರಾಧಮ ನಾನು ದೂತವತ್ಸಲ ನೀನು ಆತುರನು ನಾನು ನಿಜದಾತ ನೀನು ನೀತ ಗುರುಜಗನ್ನಾಥವಿಠಲರೇಯ ತಾತ ನೀ ಎನಗಯ್ಯ ನಿನಗಾವ ತಾತಾ 5

***


No comments:

Post a Comment