ಭಜನೆ ಭಾಗ್ಯ ಒಂದೇ ಸಾಲದೇ ಹರೀ ||ಪ||
ಭಜಕರಾದವರಿಗೆ ಹಗಲು ಇರುಳು ಮಾಳ್ಪಾ
ಭಜನೆ ಭಾಗ್ಯ ಒಂದೇ ಸಾಲದೆ ||ಅ.ಪ||
ಭಕ್ತರೆಲ್ಲರು ಕೂಡೀ ಮುಕ್ತಿಗೊಡೆಯನ ಪಾಡಿ
ಭಕ್ತಿ ಭಾಗ್ಯವ ಬೇಡಿ ನೃತ್ಯವ ಗೈಯುವಾ ||೧||
ತಾಳ ತಂಬೂರಿ ಗೆಜ್ಜೆ ಮೇಳನದಿಂದಲೀ
ತೋಳುಗಳೆತ್ತಿ ಪಾಡೀ ವೇಳೆಯ ಕಳೆವಂಥಾ ||೨||
ಹಿಂದೆ ಮುಂದಾಡುವ ನಿಂದಕರಾ ನುಡಿ
ಒಂದು ತಾರದೆ ಮನಕಾನಂದವ ಬೀರುವಾ ||೩||
ಕಟ್ಟಳೆ ಮೀರದೆ ಬಿಟ್ಟು ಬಿಡದೆ ನಿತ್ಯ
ನಿಷ್ಠೆಯಿಂದಲಿ ಗುರು ಕೊಟ್ಟ ಆಜ್ಞೆ ಎಂಬಾ ||೪||
ಕಂತುಪಿತನ ಮೂರ್ತಿ ನಿಂತು ಒಳಗೆ ಹೊರಗೆ
ಸಂತಸಪಡಿಸೆ ಏಕಾಂತ ಭಕ್ತರು ಮಾಳ್ಪ ||೫||
ಸಾಸಿರ ಸತ್ಕರ್ಮ ಮೀಸಲು ಫಲಗಳೂ
ಶ್ರೀಶನ ಧ್ಯಾನಕೆ ತ್ರಾಸಿಗೇರದೆಂಬ ||೬||
ಪದ್ಧತಿಯಂತೆ ತಂದೆ ಮುದ್ದುಮೋಹನ್ನ ಗುರು
ಪದ್ಮ ಪಾದಕೆ ಸೇರಿ ಪೊದ್ದಿದ ದಾಸ್ಯದ ||೭||
ತ್ರಿಗುಣದ ಕಲ್ಮಶ ವಗೆದು ದೂರಕೆ ಮನ
ಮಿಗಿಲಾಗಿ ಹರಿಪದ ತಗಲಿಕೊಂಬುವುದಕ್ಕೆ ||೮||
ನರ್ತನಗೈಯ್ಯುತ ಸುತ್ತಿ ಪ್ರದಕ್ಷಿಣೆ
ಎತ್ತಿ ಸ್ವರವ ಹರಿ ಮೂರ್ತಿಯ ಪಾಡುವಾ ||೯||
ಶ್ರೇಷ್ಠ ಶ್ರೀ ಗೋಪಾಲಕೃಷ್ಣವಿಠ್ಠಲನನು
ಇಟ್ಟು ಹೃತ್ಕಮಲದಿ ಮುಟ್ಟುವೋ ಹರಿಪುರ ||೧೦||
***
Bhajane bhagya onde salade hari ||pa||
Bhajakaradavarige hagalu irulu malpa
bhajane bhagya onde salade ||a.pa||
Bhaktarellaru kudi muktigodeyana padi
bhakti bhagyava bedi nrutyava gaiyuva ||1||
tala tamburi gejje melanadindali
tolugaletti padi veleya kalevantha ||2||
Hinde mundaduva nindakara nudi
ondu tarade manakanandava biruva ||3||
Kattale mirade bittu bidade nitya
nishteyindali guru kotta ajne emba ||4||
Kantupitana murti nintu olage horage
santasapadise ekanta bhaktaru malpa ||5||
Sasira satkarma misalu phalagalu
srishana dhyanake trasigerademba ||6||
Paddhatiyante tande muddumohanna guru
padma padake seri poddida dasyada ||7||
Trigunada kalmasha vagedu durake mana
migilagi haripada tagalikombuvudakke ||8||
Nartanagaiyyuta sutti pradakshine
etti svarava hari murtiya paduva ||9||
Shreshtha sri gopalakrishnavittalananu
ittu hrutkamaladi muttuvo haripura ||10||
***
ಭಜನೆ ಭಾಗ್ಯ ಒಂದೇ ಸಾಲದೇ | ಹರೀ ಪ.
ಭಜಕರಾದವರಿಗೆ ಹಗಲು ಇರುಳು ಮಾಳ್ಪಾ
ಭಜನೆ ಭಾಗ್ಯ ಒಂದೇ ಸಾಲದೆ ಅ.ಪ.
ಭಕ್ತರೆಲ್ಲರು ಕೂಡೀ ಮುಕ್ತಿಗೊಡೆಯನ ಪಾಡಿ
ಭಕ್ತಿ ಭಾಗ್ಯವ ಬೇಡಿ ನೃತ್ಯವ ಗೈಯುವಾ 1
ತಾಳ ತಂಬೂರಿ ಗೆಜ್ಜೆ ಮೇಳನದಿಂದಲೀ
ತೋಳುಗಳೆತ್ತಿ ಪಾಡೀ ವೇಳೆಯ ಕಳೆವಂಥಾ 2
ಹಿಂದೆ ಮುಂದಾಡುವ ನಿಂದಕರಾ ನುಡಿ
ಒಂದು ತಾರದೆ ಮನಕಾನಂದವ ಬೀರುವಾ 3
ಕಟ್ಟಳೆ ಮೀರದೆ ಬಿಟ್ಟು ಬಿಡದೆ ನಿತ್ಯ
ನಿಷ್ಠೆಯಿಂದಲಿ ಗುರು ಕೊಟ್ಟ ಅಜ್ಞೆ ಎಂಬಾ 4
ಕಂತುಪಿತನ ಮೂರ್ತಿ ನಿಂತು ಒಳಗೆ ಹೊರಗೆ
ಸಂತಸಪಡಿಸೆ ಏಕಾಂತ ಭಕ್ತರು ಮಾಳ್ಪ 5
ಸಾಸಿರ ಸತ್ಕರ್ಮ ಮೀಸಲು ಫಲಗಳೂ
ಶ್ರೀಶನ ಧ್ಯಾನಕೆ ತ್ರಾಸಿಗೇರದೆಂಬ 6
ಪದ್ಧತಿಯಂತೆ ತಂದೆ ಮುದ್ದುಮೋಹನ್ನ ಗುರು
ಪದ್ಮ ಪಾದಕೆ ಸೇರಿ ಪೊದ್ದಿದ ದಾಸ್ಯದ 7
ತ್ರಿಗುಣದ ಕಲ್ಮಶ ವಗೆದು ದೂರಕೆ ಮನ
ಮಿಗಿಲಾಗಿ ಹರಿಪದ ತಗಲಿಕೊಂಬುವುದಕ್ಕೆ 8
ನರ್ತಗೈಯ್ಯುತ ಸುತ್ತಿ ಪ್ರದಕ್ಷಿಣೆ
ಎತ್ತಿ ಸ್ವರವ ಹರಿ ಮೂರ್ತಿಯ ಪಾಡುವಾ 9
ಶ್ರೇಷ್ಠ ಶ್ರೀ ಗೋಪಾಲಕೃಷ್ಣವಿಠ್ಠಲನನು
ಇಟ್ಟು ಹೃತ್ಕಮಲದಿ ಮುಟ್ಟುವೋ ಹರಿ ಪುರ 10
****
No comments:
Post a Comment