Saturday, 19 June 2021

ಹ್ಯಾಗಾಗುವುದೊ ತಿಳಿಯದು ಈಶನಜ್ಞೆ ankita gururama vittala

 ಶ್ರೀ ಗುರುರಾಮವಿಠಲ ದಾಸರ ರಚನೆ 

ಹ್ಯಾಗಾಗುವುದೊ ತಿಳಿಯದು ಈಶನಜ್ಞೆ 

ಪ

ಭಾಗವರತ ಸೇವೆಯಲ್ಲಿ ಬಹು ಪ್ರವೀಣವೆನೆಪುದೊ

ರಾಗಲೋಭದಲ್ಲಿ ಮುಳುಗಿಸಿ ರಚ್ಚೆಗಿಕ್ಕಿ ಬಿಡುವುದೊ 

ಅ.ಪ

ಕೋರಿಕೆಗಳ ಬಿಡಿಸಿ ಸದಾ ಗುಣವಂತನೆನಿಸುವುದೊ

ನಾರಿ ಮಕ್ಕಳಾಸೆಯಲಿಯನಾಥವ ಮಾಡಿಸುವುದೊ 

1

ದ್ವಂದ್ವಗಳಲಿಲೇಪವಿಲ್ಲದಾನಂದವ ಪೊಂದಿಸುವುದೊ

ಇಂದುಮುಂದು ತಿಳಿಯಗೊಡದೆ

ಮಂದಮತಿಯನಿಸುವುದೊ 

2

ಶ್ರವಣಮನನ ಸಾಧನೆಗಳ ಸದಾ ಮಾಡಿಸುವುದೊ

ಭವಭವದಲಿ ಮೂಢನೆನಿಸಿ ಪಾಪರತನ ಮಾಳ್ವದೊ 

3

ಸರ್ವರಲ್ಲಿ ಗುಣವೆ ಕಾಣಿಸಿ ಸಂತೋಷಪಡಿಸುವುದೊ

ದುರ್ವಿನೀತನೆನಸಿ ಸದಾ ದುಷ್ಕಾರ್ಯ ಮಾಡಿಸುವುದೊ 

4

ತರತಮ ಪಂಚಭೇದ ಜ್ಞಾನ ತತ್ವ ತಿಳಿಸಿ ಸುಖಿಪುದೊ

ದುರಹಂಕಾರರಲ್ಲಿ ಮೆರೆಸಿ ನರಕದಿ ಬೀಳಿಸುವುದೊ 

5

ದಾನಧರ್ಮ ಪರೋಪಕಾರ ದಯಾವಂತನೆನಿಪುದೊ

ಹೀನನೆನಸಿ ಸಕಲರಿಂದ ಹೀಯ್ಯಾಳಿಸಿಬಿಡುವುದೊ 

6

ಭವಹರ ಗುರುರಾಮವಿಠಲ ಭಾರ ಕರ್ತನಾದವ

ಅವರವರಧಿಕಾರದಂತೆ ಎಲ್ಲರಿಗೂ ನಡಿಸುವಾ 

7

***


No comments:

Post a Comment