Tuesday, 25 May 2021

ಬಂದೇನೋ ವಿಠಲರಾಯ ದಯದಿಂದಾ ankita lakumeesha

 ರಾಗ - : ತಾಳ -



ಬಂದೇನೋ ವಿಠಲರಾಯ l ದಯ l ದಿಂದಾ ಪಿಡಿಯನ್ನ ಕೈಯ್ಯ ll ಪ ll


ಬಂದೇನೋ ವಿಠಲರಾಯ l ದಯ 

ದಿಂದಾ ಪಿಡಿ ಎನ್ನ ಕೈಯ್ಯ l  ಆಹಾ l 

ಹಿಂದೆ ನಾನಾ ಜನ್ಮ l ದಿಂದ ಮಾಡಿದ ಅಘ l

ವೃಂದ ಕಳೆದು ಹೃನ್ಮಂದಿರದಿ ಪೊಳೆ ಎಂದು ll ಅ ಪ ll


ಮಡದಿ ಮಕ್ಕಳ ಮೋಹದಿಂದೆ l ಭವ l ಕಡಲೊಳು ಬಿದ್ದು ನಾನೊಂದೆ l ಈಗ l

ದಡ ಸೇರಿಸುವಂಥ ಸ್ವಾಮಿ ನೀ ವಂದೆ l ಎಂದು l

ಸಡಗರ ಮುನಿಮತದಿಂದೆ ll ಆಹಾ ll

ಅಡಿಗಳ ಪಿಡಿದೇನೋ l

ಧೃಢಜ್ಞಾನ ಭಕುತಿಲಿ l

ಒಡನೆ ನಿನ್ನಯ ಧ್ಯಾನ l

ಕೊಡು ಭಾಗ್ಯ ಎಂತೆಂದು ll 1 ll


ವೇದಾದಿಗಳು ಓದಲಿಲ್ಲ l ಪೂರ್ಣಬೋಧರ ಶಾಸ್ತ್ರದ ಹುರುಳೆನ್ನೊಳಿಲ್ಲ l ಆಶೆ l 

ಬಾಧೇಲಿ ದುಷ್ಕರ್ಮವೆಲ್ಲ ಗೈದೆ l

ಮೇದಿನಿಯೊಳು ನಾನೇ ಖುಲ್ಲ l ಆಹಾ l

ಭೇದ ಮತಜ್ಞರ l ಬೋಧನೆ ಸವಿಯುತ l

ಸಾಧು ಸತ್ಸಂಗದಿ l ಮೋದವೆ ಕೊಡು ಎಂದು ll 2 ll


ಮಾನವೀ ದಾಸರಿಗಂದು l ಹರಿ l ನೀನಿತ್ತ ಔತಣವಿಂದು l

ಹೀನ l ಮಾನವ ವರ್ಣಿಸೆ ಅಲ್ಪ ನಾನಿಂದು l

ನಾನಾ ಅಪರಾಧ ಕ್ಷಮಿಸುತ ಇಂದು ll ಆಹಾ ll

ಧೇನು ವತ್ಸ ನ್ಯಾಯ l ಸಾನುರಾಗದಿ ತೋರಿ l

ಪ್ರಾಣೇಶ ಲಕುಮೀಶ ನೀನೊಲಿಯಬೇಕೆಂದು ll 3 ll

***


No comments:

Post a Comment