ರಾಗ - : ತಾಳ -
ದೂರ ನೋಡಲಾಗದೋ ಶ್ರೀರಾಮಚಂದ್ರ ll ಪ ll
ಕಾರುಣ್ಯನಿಧಿ ನೀನು ಸುಗುಣ ಪೂರ್ಣನು ನೀನು l
ಶರಣ ರಕ್ಷಕ ನೀನು ಸರ್ವಾಧಾರ ll
ಪರಕೀಯ ನಲ್ಲವೋ ನಿನ್ನವರವ ನಾನು l
ಕರಪಿಡಿದು ಎನ್ನ ಪೊರೆಯಬೇಕಲ್ಲದೆ ll 1 ll
ವೇದಗಮ್ಯನು ನೀನು ವೇದಗೋಚರ ನೀನು l
ಸಾಧು ಸಜ್ಜನರನ್ನು ಉದ್ಧರಿಪನು ನೀನು l
ಮಾಧವನೆ ನಿನ್ನ ಶರಣು ಬಂದೆನು ನಾನು l
ಖೇದ ಮಾಡದೆ ಎನ್ನ ಸಾಧುಕುಲ ತಿಲಕನೆ ll 2 ll
ಜಗವ ರಕ್ಷಿಪ ನೀನು ಜಗವ ಪಾಲಿಪ ನೀನು l
ಜಗದಾಧಾರಕನು ಎಂದು ಪೊಗಳುತಿರೆ ll
ಜಗದ ಗುರುಶಾಮಸುಂದರ ದೇವನೆ l
ಮೊಗವ ತಿರುಗದಲೆ ಕಣ್ಣೆತ್ತಿ ನೋಡದೇ ll 3 ll
***
No comments:
Post a Comment