Sunday, 14 March 2021

ರಾಮಚಂದ್ರ ನೀನೇ ಪಾಲಿಸೊ ankita shreeda vittala

 ರಾಗ - : ತಾಳ -


ರಾಮಚಂದ್ರ ನೀನೇ ಪಾಲಿಸೊ ಸರೋಜನಾಭ

ಸಾಧುಸಂಘ ಶೀಘ್ರಕೊಡಿಸೊ ll ಪ ll


ಎಷ್ಟು ದಿನ ಕಷ್ಟಪಡುವದೋ ಈ ಭವದೊಳು

ಈಸಲಾರೆನಯ್ಯ ಹರಿಯೇ

ಇಷ್ಟು ದಿನ ಇದ್ದಂತೆ ಇರಲಾರೆನೆಂದು ಕರವ

ಮುಟ್ಟಿ ಮುಗಿದು ಬೇಡಿಕೊಂಬೆ ಮುರಾರಿ ಕೃಷ್ಣ ನೀನೇ ಕಾಯೋ ll 1 ll


ಹರಿಹರರು ಸಮಾನರೆನ್ನದಾ ಈ ಸಜ್ಜನರಾ-

ಸಂಗದಿಂದ ಹೀನಾ ನಾನಾದೆ

ಇನ್ನುಮ್ಯಾಲೆ ಇಲ್ಲವಯ್ಯ ಸೃಷ್ಟಿಗಧಿಕ ಶ್ರೀನಿವಾಸಾ

ಇನ್ನು ನಿನ್ನ ಸ್ಮರಣೆಯಿಂದ ಇರುವೆನಯ್ಯ ಮುಕುಂದ ll 2 ll


ಪೃಥ್ವಿಯಲ್ಲಿ ಪುಟ್ಟಿದಾ ಮೊದಲು ನಿನ್ನಾ ವೃತ್ತಾಂತ 

ಒಂದು ದಿನ ಮಾಡಲಿಲ್ಲವೋ 

ಎಂದು ಎನ್ನ ಮ್ಯಾಲೆ ಕ್ರೂರದೃಷ್ಟಿಯಿಂದಾ ನೋಡಾದೀರು

ವಾಸುದೇವ ವೈಕುಂಠವಾಸ ಲಕ್ಷುಮಿ ರಮಣ ll 3 ll


ನಿತ್ಯದಲ್ಲಿ ವಿಪ್ರರಾ ವೃಂದಾದೊಳಗೆ ನಾ ಆ-

ಸಕ್ತನಾಗಿ ಇರುವೆ ಮುಕುಂದಾ

ಎಂಥ ಪಾಪಿ ಎಂದು ಉದಾಸೀನಮಾಡಿ ನೋಡಬೇಡ

ನಿನ್ನ ಕಂದಾನೆಂದು ತಿಳಿದು ಪಾಲಿಸಯ್ಯ ನಾರಾಯಣ ll 4 ll


ಹನುಮ ಭೀಮ ಮಧ್ವರಿಂದಾ ಸೇವಿತ ಪ್ರಿಯಾ

ಶಾಂತಮೂರ್ತಿ ಶಾಮವರ್ಣನೇ

ಶ್ರೀದವಿಟ್ಠಲೇಶಾ ನಿನ್ನಾ ದಾಸನೆಂದು ಪಾಲಿಸೆನ್ನ

ಸಾರಿ ಬೇಡಿಕೊಂಬೆನಯ್ಯ ರಾಮಚಂದ್ರ ರಾವಣಾರಿ ll 5 ll

***


No comments:

Post a Comment