Saturday, 13 March 2021

ಪಾಹಿ ನರಸಿಂಹ ಪರಮ ಪುರುಷನೆ ankita gurumuddu krishna

 ರಾಗ –: ತಾಳ –


ಪಾಹಿ ನರಸಿಂಹ ಪರಮ ಪುರುಷನೆ l

ದೇಹಿ ಅಂದೆನೊ ನಿನ್ನ ದಾಸ್ಯನು l

ಮಹಭಯ ನಿವಾರಣ ಮಾತು ಮನಕೆ ತಂದು l

ಸಹಯವಾಗೆನ್ನ ಸುವಾಕ್ಯಕೆ ll ಪ ll


ಎಲ್ಲಿ ಹೋಗಲು ಸೊಲ್ಲು ನುಡಿಸೊ ನಿನ್ನಾ l

ಬಲ್ಲವರ ಸಹವಾಸದಿ l

ನಿಲ್ಲದೆ ವಂದರಘಳಿಗೆ ಸುಮ್ಮನೆ l

ಅಲ್ಲಿಲ್ಲಿಲ್ಲಿಲೆಲ್ಲಲ್ಲಿ ll 1 ll


ಗಾಡಿಕಾರ ನೀನು ಮಾಡಿದ ಮಹಿಮೆಯ l

ಆಡಲೇನು ನಾ ನಾಡೋಳು l

ಆಡುವ ಬಾಲಕ ಆಡಿದ ಮಾತಿಗೆ l

ತೋಡಿದೆ ಅಸುರನ ವಡಲವನೂ ll 2 ll


ಗುರುವಂತರ್ಗತ ವರದ l

ಗುರುಮುದ್ದುಕೃಷ್ಣನೆನಿಸಿಕೊಂಡು ನೀ l

ನಿರುತದಿ ಅರಿಗಳಾರು ಎನ್ನ l

ಅರಮರೆ ಗೊಳಿಸಲು l

ಪರೀಕ್ಷಿಸಿ ನೋಡದೆ ರಕ್ಷಿಸೋ ll 3 ll

***


No comments:

Post a Comment