Friday 19 February 2021

ಚಿತ್ತ ಸ್ವಸ್ಥವಿಲ್ಲಾ ಅನ್ನಕೆ ಕರಿಯದಿರೆ ankita vijaya vittala

check contents.. incomplete?
ಚಿತ್ತ ಸ್ವಸ್ಥವಿಲ್ಲಾ ಅನ್ನಕೆ ಕರಿಯದಿರೆ |
ವಿತ್ತದಲಿ ಸ್ನೇಹ ಇದ್ದದಾವಲ್ಲಿ ಇಲ್ಲ |
ಅತ್ತಲಿತ್ತ ನೋಡದೆ ನಿಸ್ಪೃಹನೆನಿಸಿಕೊಂಡು |
ಹತ್ತಿದ ಒಂದು ಕಾಸು ಒಬ್ಬರಿಗೀಯೆ ನಾನು |
ಉತ್ತರ ನೋಡಿದರು ಕೇವಲ ಸಜ್ಜನ |
ವೃತ್ತಿಯಂತೆ ತೋರುವೆ ಗಾರುಡವಾಗಿಪ್ಪದು |
ಉತ್ತಮವಾಗಿ ತೋರಿ ಯಥಾರ್ಥವೆಂಬೋ ಹಾಗೆ |
ಹತ್ತದು ಒಲ್ಲೆನೆಂಬೋ ಮನಸ್ಸಿನಲ್ಲಿ ಚಿಂತಿಸುವೆ |
ತುತ್ತು ಒಳ್ಳೇದು ದೊರಕೆ ನಗುವೆ ಕೆಲದಾಡುವೆ |
ಉಪಕಾರ ಅರಿಯದೆ ಉಚಿತಾರ್ಥ ತಿಳಿಯದೆ |
ಅಪಹಾಸದಲಿ ನಿರಂತರ ತಿರುಗೀ |
ಅಪರಿಮಿತ ದೋಷಕಾರಿ ನಾನು |
ನಿತ್ಯಕರ್ಮಗಳೆಲ್ಲವು ಪೊಟ್ಟಿಗಾಗಿ ಅ |
ನೃತ್ತ ನಾಡುವೆ ಬಲು ವಿಲಕ್ಷಣನಾಗಿ |
ಸತ್ಯ ಸಂಕಲ್ಪ ಸಿರಿವಿಜಯವಿಠ್ಠಲರೇಯ |
ಹೊತ್ತುಪೋಗಾಡಿದೆನೊ ಉದರಂಭರಣಾಗಿ ||
ಮತ್ಸರವನು ಅಳಿದು ಶ್ರೀ ವೆಂಕಟೇಶನ ಯಾತ್ರೆ | 
ಉತ್ಸಹದಲಿ ಮಾಡೆ ವಿಜಯವಿಠ್ಠಲ ಒಲಿವಾ ||
********

No comments:

Post a Comment