ಪುರಂದರದಾಸರು
ಎಂದಿಗೆ ನಾನಿನ್ನು ಧನ್ಯನಹೆನೊಎಂದಿಗೆ ನಿನ್ನ ಚಿತ್ತಕೆ ಬಹೆನೊ ಅಚ್ಯುತನೆ ಪ
ಪುಲು ಮರವು ಗಿಡ ಬಳ್ಳಿ ಕುಲದಲಿಪ್ಪತ್ತು ಲಕ್ಷಜಲ ಜೀವದೊಳಗೆ ಒಂಬತ್ತು ಲಕ್ಷ ||ಅಳಲಿ ಏಕಾದಶ ಲಕ್ಷ ಕ್ರಿಮಿ ಕೀಟದಲಿತೊಳಲಿ ಬಳಲಿದೆನಂಡಜದೊಳು ದಶಲಕ್ಷ 1
ಚರಣನಾಲ್ಕರಲಿ ಮೂವತ್ತು ಲಕ್ಷ ಜೀವಿಸಿನರನಾಗಿ ಚರಿಸಿದೆನು ನಾಲ್ಕು ಲಕ್ಷ ||ಪರಿಪರಿಯ ಭವದಿಂದ ಬಲು ನೊಂದೆನೈ ನಿನ್ನಸರಸಿಜಸಂಭವನ ಕಲ್ಪದಲ್ಲಿ2
ಎಂಬತ್ತು ನಾಲುಕು ಲಕ್ಷಯೋನಿಗಳಲ್ಲಿಅಂಬುಜನಾಭ ನಿನ್ನ ಲೀಲೆಗಾಗಿ ||ಕುಂಭಿನಿಯೊಳು ಬಂದು ನೊಂದೆನಯ್ಯಾ ಸ್ವಾಮಿಕಂಬುಕಂಧರಸಿರಿಪುರಂದರವಿಠಲ3
******

No comments:
Post a Comment