ಪುರಂದರದಾಸರು
ಎಂದಿಗಾದರು ನಿನ್ನ ನಂಬಿದೆ - ಚೆಲ್ವ - |ಮಂದರಧರ ಮದನಜನಕ |ವೃಂದಾವನಪತಿ ಗೋವಿಂದ ಪ
ತರುಣಿಯ ಮಾನವನು ಕಾಯ್ದೆ - ಅಂದು - |ದುರುಳ ತನ್ನ ಸುತನ ಕೊಲಲು ಒದಗಿ ಕಂಬದಿ ಬಂದೆ ||ಕರುಣದಿ ಶಿಲೆಯನುದ್ಧರಿಸಿದೆ ತನ್ನ - |ಮರಣಕಾಲಕೆ ನಾಗರನೆಂದರೆ ಮುದದಿಮುಂದೆ ನಿಂದೆ ಗೋವಿಂದ 1
ಧ್ರುವ - ವಿಭೀಷಣ - ರುಕ್ಮಾಂಗದರು ನಿನ್ನ ವರಿಸಲು |ಆ ವ್ಯಾಸ ನಾರದಬಲಿ ಮುಖ್ಯ ಕಲಿಪಾರ್ಥನು ||ಪವನಸುತನು ಅಂಬರೀಷನು - ತ್ರೈ - |ಭುವನವರಿಯೆ ನಿನ್ನ ನೆನೆಯೆ ಪದವನಿತ್ತೆ ಗೋವಿಂದ 2
ದುರಿತ ವಿನಾಶ ದೋಷದೂರನೆ - ಜಗದ್ - |ಭರಿತ ದೈತ್ಯದಳಸಂಹಾರ ಶರಣು ಚಾರುಚರಿತ್ರ ||ಕರಿವರದ ಪುರಂದರವಿಠಲ ಕಾಯೊ |ಶರಣಹೃದಯಸರಸಿಜ ಪರಮಪಾವನ ಗೋವಿಂದ3
*******

No comments:
Post a Comment