Tuesday, 3 December 2019

ಒಂದಾನೊಂದು ದಿವಸದಲ್ಲಿ ಗುರುವ್ಯಾಸರಾಯರು purandara vittala

ಒಂದಾನೊಂದು ದಿವಸದಲ್ಲಿ ಗುರುವ್ಯಾಸರಾಯರು ||pa||

ಅಂದದಿಂದ ಪುರಂದರದಾಸರಿ |
ಗಿಂದು ಭೋಜನಕ್ಕೆ ಬನ್ನಿರೆಂದು ಕರೆದರೂ ||a.pa||

ಪೇಳಿತೆಂದು ದಾಸರು ಪೋಗಿ ತಾವು ನಿರ್ಮಲ ಸ್ನಾನ
ಜಪಮಂತ್ರ ಹರಿಪೂಜೆಯನೆ ಮಾಡಿ ||
ಧಳಥಳಿಸುವ ವಿಠಲನ ದಿವ್ಯ ಪಾದ
ಗಳ ಧ್ಯಾನಿಸಿ ಕುಳಿತರು ಜನಗಳೆಲ್ಲ ಕೇಳಿ||1||

ವಿಠಲನ ದಿವ್ಯ ಮೂರ್ತಿಯ ಪಾಡಿ ದೃಷ್ಟಿಯಿಂದಲಿ ನೋಡಿ |
ಮುಟ್ಟಿ ಮುಂದೊಲಿದು ಕುಣಿಕುಣಿದಾಡಿ ||
ಥಟ್ಟನೆ ವೇದಕ್ಕೆ ಸಮನಾದ ಪದಗಳು |
ನಿಷ್ಠೆಯಿಂದ್ಹೇಳಿ ಅಭೀಷ್ಟವ ಪಡೆದರು||2||

ಎಡೆಯೊಳು ಷಡ್ರಸದನ್ನವ ನೀಡೆ | ಕಡು ಮಮತೆಗಳಿಂದ |
ಬಿಡದೆ ದಾಸರ ದಾರಿಯ ನೋಡಿ ||
ಯೆಡ ಬಲದಷ್ಟ ದಿವ್ಯದಿಂಡೆಯರೆಲ್ಲಾ |
ಕಡೆಯದೆಶೆ ಧರಿಸಿದರು ದಾಸರಾ ||3||

ಹಗಲು ಒಂಭತ್ತು ತಾಸಾಗಿರಲು |
ಆಗೆದ್ದು ಬೇಗ ಗುರುಗಳ ಸಮೀಪಕ್ಕೆ ಬರಲು ||
ಮುಗಿದು ಕರಯುಗ್ಮವ ಬಗೆ ಬಗೆ ಸ್ತುತಿಸುತಾ |
ಜಗದೊಳು ನಾನಪರಾಧಿಯೆಂದರೂ ||4||

ಭೋಜನವ ಮಾಡಿ ಗುರುಗಳಂದು ಸಿಂಹಾಸನದಲ್ಲಿ |
ರಾಜಿಸುತ್ತ ಬಂದು ಕುಳಿತಿರಲಂದೂ ||
ಆ ಜನದೊಡಗೀ ದಾಸರು ಕರೆಯಲು |
ನೈಜಭಾವದಿಂದು ಬಂದು ಕುಳಿತರೂ ||5||

ಪದಗಳು ಬರದ ವಹಿಯಕೊಂಡು ಪೋಗಿ |
ಮಧ್ವಶಾಸ್ತ್ರದ ಮೇಲೆ ಕುಳ್ಳಿರಲಾಗ ||
ಅದನರಿಯದೆ ದಿಂಡೆಯನೊಬ್ಬನು ಆ |
ಪದವಹಿಯ ತೆಗೆದು ಬಿಸುಟನಾಗಾ ||6||

ಯೆರಡಾವರ್ತಿ ತೆಗೆಯಲು ಆಗ |
ತಿರುತಿರುಗಿ ಬಂದು ವರಪುಸ್ತಕದ ಮ್ಯಾಲೆ ಕುಳ್ಳಿರಲಂದೂ ||
ಗುರು ವ್ಯಾಸರಾಯರು ನೋಡಿ ಹರುಷದಿಂದ |
ಕರೆದು ಬೈದರವಗೆ ಕಡು ಮೂರ್ಖನೆಂದೂ ||7||

ಪದದೊಹಿ ತೆಗೆದು ಬಿಸಾಡಿದರೆ ತಿರುತಿರು
ಗ್ಯದರಮ್ಯಾಲೆ ವರನಾಲ್ಕು ವೇದಾರ್ಥದರೊಳಗುಂಟು ||
ನರರುತ್ತಮರೆಲ್ಲ ನೋಡಿ ಹರುಷದಿಂದ |
ಪುರಂದರ ಉಪನಿಷತ್ತೆಂದರೂ ||8||

ಗುರುರಾಯರು ದಾಸರ ನೋಡಲಾಗ ಭರದಿಂದ ಯೆದ್ದು |
ಅರಿವೆಯ ಕೈಯಿಂದೊರಸಲು ಆಗ ||
ತ್ವರಿತದಿ ಕೇಳಲು ವಿಠಲನ ಗುಡಿಯೊಳು |
ಪಡದಗುರಿ ಹತ್ತವು ವರಿಸಿದೆವೆಂದರು ||9||

ಹಾಗೆಂದು ನುಡಿದಾಕ್ಷಣದಲಿ ಬೇಗ ಶಿಷ್ಯರಿಗೆ |
ಹೋಗಿ ನೋಡಿ ಬಾರೆಂದೆನಲಾಗಿ ||
ಬೇಗದಿಂದಲಿ ಬಂದು ಕೇಳಲು ಅವರು |
ಈಗ ದಾಸರು ಬಂದು ಪರಿಹರಿಸಿದರೆಂದು ||10||

ಆ ಮಾತು ಕೇಳಿದಾಕ್ಷಣದಿ ಬೇಗ |
ಪ್ರೇಮದಿ ಬಂದು ಸ್ವಾಮಿರಾಯರಿಗೆ ಪೇಳಲು ಆಗ ||
ನಾಮವ ಸ್ಮರಿಸುತ ಪ್ರೇಮಾಲಿಂಗನವಿತ್ತು |
ಕಾಮಿತಾರ್ಥ ಫಲವೀವ ಕಲ್ಪತರುವೆಂದರೂ||11||

ಇಂತು ಅನುಭವ ಮಾತುಗಳನಾಡಿ ಲಕ್ಷ್ಮೀಕಾಂತನ |
ಅಂತರಂಗದಲಿ ಅತಿಮಾನವ ಮಾಡಿ ||
ಕಾಂತಿ ಹೆಚ್ಚಿದ ಕಂತುಪಿತನ ಮೂರ್ತಿ |
ಶಾಂತತ್ವದಿ ನೋಡುತ ಶರಣು ಮಾಡಿದರೂ 12

ಗಜಪುರದಲ್ಲಿ ಇರುವರು ಕೂಡಿ ವಿಜಯವಿಠ್ಠಲನ್ನ |
ಭಜನೆಯಿಂದ ದಿನ ದಿನ ಪೊಗಳಿ ||
ತ್ರಿಜಗದೊಡೆಯ ಗುರು ಪುರಂದರವಿಠಲನ |
ನಿಜ ವೈಕುಂಠದ ಮುಕ್ತಿಯೈದಿದರೂ ||13||
***

Ondanondu divasadalli guruvyasarayaru ||pa||

Andadinda purandaradasari |
Gindu bojanakke bannirendu karedaru ||a.pa||

Pelitendu dasaru pogi tavu nirmala snana
Japamantra haripujeyane madi ||
Dhalathalisuva vithalana divya pada
Gala dhyanisi kulitaru janagalella keli||1||

Vithalana divya murtiya padi drushtiyindali nodi |
Mutti mundolidu kunikunidadi ||
Thattane vedakke samanada padagalu |
Nishtheyind~heli abishtava padedaru||2||

Edeyolu shadrasadannava nide | kadu mamategalinda |
Bidade dasara dariya nodi ||
Yeda baladashta divyadindeyarella |
Kadeyadese dharisidaru dasara ||3||

Hagalu ombattu tasagiralu |
Ageddu bega gurugala samipakke baralu ||
Mugidu karayugmava bage bage stutisuta |
Jagadolu nanaparadhiyendaru ||4||

Bojanava madi gurugalamdu simhasanadalli |
Rajisutta bandu kulitiralamdu ||
A janadodagi dasaru kareyalu |
Naijabavadindu bandu kulitaru ||5||

Padagalu barada vahiyakondu pogi |
Madhvasastrada mele kulliralaga ||
Adanariyade dindeyanobbanu A |
Padavahiya tegedu bisutanaga ||6||

Yeradavarti tegeyalu Aga |
Tirutirugi bandu varapustakada myale kulliralandu ||
Guru vyasarayaru nodi harushadinda |
Karedu baidaravage kadu murkanendu ||7||

Padadohi tegedu bisadidare tirutiru
Gyadaramyale varanalku vedarthadarolaguntu ||
Nararuttamarella nodi harushadinda |
Purandara upanishattendaru ||8||

Gururayaru dasara nodalaga Baradinda yeddu |
Ariveya kaiyindorasalu Aga ||
Tvaritadi kelalu vithalana gudiyolu |
Padadaguri hattavu varisidevendaru ||9||

Hagendu nudidakshanadali bega sishyarige |
Hogi nodi barendenalagi ||
Begadimdali bandu kelalu avaru |
Iga dasaru bandu pariharisidarendu ||10||

A matu kelidakshanadi bega |
Premadi bandu svamirayarige pelalu Aga ||
Namava smarisuta premalinganavittu |
Kamitartha palaviva kalpataruvendaru||11||

Intu anubava matugalanadi lakshmikantana |
Antarangadali atimanava madi ||
Kanti heccida kantupitana murti |
Santatvadi noduta saranu madidaru 12

Gajapuradalli iruvaru kudi vijayaviththalanna |
Bajaneyinda dina dina pogali ||
Trijagadodeya guru purandaravithalana |
Nija vaikunthada muktiyaididaru ||13||
***
ರಾಗ - : ತಾಳ -

ಒಂದಾನೊಂದು ದಿವಸದಲ್ಲಿ ಗುರುವ್ಯಾಸರಾಯರು ll ಪ ll 

ಚಂದದಿಂ ದ್ವಾದಶಿ ಸಾಧನೆ ಬರಲು
ಅಂದದಿಂದ ಪುರಂದರದಾಸರಿ l 
ಗಿಂದು ಭೋಜನಕ್ಕೆ ಬನ್ನಿರೆಂದು ಕರೆದರೂ ll ಅ ಪ ll 

ಪೇಳಿತೆಂದು ದಾಸರು ಪೋಗಿ ತಾವು ನಿರ್ಮಲ ಸ್ನಾನ
ಜಪಮಂತ್ರ ಹರಿಪೂಜೆಯನೆ ಮಾಡಿ ll
ಥಳಥಳಿಸುವ ವಿಟ್ಠಲನ ದಿವ್ಯ ಪಾದ
ಗಳ ಧ್ಯಾನಿಸಿ ಕುಳಿತರು ಜನಗಳೆಲ್ಲ ಕೇಳಿ ll ೧ ll

ವಿಟ್ಠಲನ ದಿವ್ಯ ಮೂರ್ತಿಯ ಪಾಡಿ ದೃಷ್ಟಿಯಿಂದಲಿ ನೋಡಿ l
ಮುಟ್ಟಿ ಮುಂದೊಲಿದು ಕುಣಿಕುಣಿದಾಡಿ ll
ಥಟ್ಟನೆ ವೇದಕ್ಕೆ ಸಮನಾದ ಪದಗಳು l
ನಿಷ್ಠೆಯಿಂದ್ಹೇಳಿ ಅಭೀಷ್ಟವ ಪಡೆದರು ll ೨ ll

ಎಡೆಯೊಳು ಷಡ್ರಸದನ್ನವ ನೀಡೆ l ಕಡು ಮಮತೆಗಳಿಂದ l
ಬಿಡದೆ ದಾಸರ ದಾರಿಯ ನೋಡಿ ll
ಯೆಡ ಬಲದಷ್ಟ ದಿವ್ಯ ದಂಡೆಯರೆಲ್ಲಾ l
ಕಡೆಯದೆಶೆ ಧರಿಸಿದರು ದಾಸರಾ ll ೩ ll

ಹಗಲು ಒಂಭತ್ತು ತಾಸಾಗಿರಲು l
ಆಗೆದ್ದು ಬೇಗ ಗುರುಗಳ ಸಮೀಪಕ್ಕೆ ಬರಲು ll
ಮುಗಿದು ಕರಯುಗ್ಮವ ಬಗೆ ಬಗೆ ಸ್ತುತಿಸುತಾ l
ಜಗದೊಳು ನಾನಪರಾಧಿಯೆಂದರೂ ll ೪ ll 

ಭೋಜನವ ಮಾಡಿ ಗುರುಗಳಂದು ಸಿಂಹಾಸನದಲ್ಲಿ l
ರಾಜಿಸುತ್ತ ಬಂದು ಕುಳಿತಿರಲಂದೂ ll
ಆ ಜನದೊಡಗೀ ದಾಸರು ಕರೆಯಲು l
ನೈಜಭಾವದಿಂದ ಬಂದು ಕುಳಿತರೂ ll ೫ ll

ಪದಗಳು ಬರದ ವಹಿಯಕೊಂಡು ಪೋಗಿ l
ಮಧ್ವಶಾಸ್ತ್ರದ ಮೇಲೆ ಕುಳ್ಳಿರಲಾಗ ll
ಅದನರಿಯದೆ ದಿಂಡೆಯನೊಬ್ಬನು ಆ l
ಪದವಹಿಯ ತೆಗೆದು ಬಿಸುಟನಾಗಾ ll ೬ ll

ಎರಡಾವರ್ತಿ ತೆಗೆಯಲು ಆಗ l
ತಿರುತಿರುಗಿ ಬಂದು ವರಪುಸ್ತಕದ ಮ್ಯಾಲೆ ಕುಳ್ಳಿರಲಂದೂ ll
ಗುರು ವ್ಯಾಸರಾಯರು ನೋಡಿ ಹರುಷದಿಂದ l
ಕರೆದು ಬೈದರವಗೆ ಕಡು ಮೂರ್ಖನೆಂದೂ ll ೭ ll

ಪದದೊಹಿ ತೆಗೆದು ಬಿಸಾಡಿದರೆ ತಿರುತಿರು
ಗ್ಯದರಮ್ಯಾಲೆ ವರನಾಲ್ಕು ವೇದಾರ್ಥದರೊಳಗುಂಟು ll
ನರರುತ್ತಮರೆಲ್ಲ ನೋಡಿ ಹರುಷದಿಂದ l
ಧರೆಯೊಳು ಪುರಂದರ ಉಪನಿಷತ್ತೆಂದರೂ ll ೮ ll

ಗುರುರಾಯರು ದಾಸರ ನೋಡಲಾಗ ಭರದಿಂದ ಯೆದ್ದು l
ಅರಿವೆಯ ಕೈಯಿಂದೊರೆಸಲು ಆಗ ll
ತ್ವರಿತದಿ ಕೇಳಲು ವಿಟ್ಠಲನ ಗುಡಿಯೊಳು l
ಪಡದಗುರಿ ಹತ್ತವು ವರಿಸಿದೆವೆಂದರು ll ೯ ll

ಹಾಗೆಂದು ನುಡಿದಾಕ್ಷಣದಲಿ ಬೇಗ ಶಿಷ್ಯರಿಗೆ l
ಹೋಗಿ ನೋಡಿ ಬಾರೆಂದೆನಲಾಗಿ ll
ಬೇಗದಿಂದಲಿ ಬಂದು ಕೇಳಲು ಅವರು l
ಈಗ ದಾಸರು ಬಂದು ಪರಿಹರಿಸಿದರೆಂದು ll ೧೦ ll

ಆ ಮಾತು ಕೇಳಿದಾಕ್ಷಣದಿ ಬೇಗ l
ಪ್ರೇಮದಿ ಬಂದು ಸ್ವಾಮಿರಾಯರಿಗೆ ಪೇಳಲು ಆಗ ll
ನಾಮವ ಸ್ಮರಿಸುತ ಪ್ರೇಮಾಲಿಂಗನವಿತ್ತು l
ಕಾಮಿತಾರ್ಥ ಫಲವೀವ ಕಲ್ಪತರುವೆಂದರೂ ll ೧೧ ll

ಇಂತು ಅನುಭವ ಮಾತುಗಳನಾಡಿ ಲಕ್ಷ್ಮೀಕಾಂತನ l
ಅಂತರಂಗದಲಿ ಅತಿಮಾನವ ಮಾಡಿ ll
ಕಾಂತಿ ಹೆಚ್ಚಿದ ಕಂತುಪಿತನ ಮೂರ್ತಿ l
ಶಾಂತತ್ವದಿ ನೋಡುತ ಶರಣು ಮಾಡಿದರೂ ll ೧೨ ll

ಗಜಪುರದಲ್ಲಿ ಇರುವರು ಕೂಡಿ ವಿಜಯವಿಟ್ಠಲನ್ನ l
ಭಜನೆಯಿಂದ ದಿನ ದಿನ ಪೊಗಳಿ ll
ತ್ರಿಜಗದೊಡೆಯ ಗುರು ಪುರಂದರ ವಿಟ್ಠಲನ l
ನಿಜ ವೈಕುಂಠದ ಮುಕ್ತಿಯೈದಿದರೂ ll ೧೩ ll
***

No comments:

Post a Comment