by ಗೋವಿಂದದಾಸ
ಈತನೀಗ ಶ್ರೀನಿವಾಸನೂ ಶ್ರೀರಂಗನೂ
ಈತನೀಗ ಶ್ರೀನಿವಾಸನೂ ಪ
ಈತನೀಗ ಶ್ರೀನಿವಾಸ ಈತ ಸಕಲಾ ಲೋಕಕೀಶಈತ ಭೂತಪತಿಯ ಪ್ರೀತ ಈತ ಲಕ್ಷ್ಮೀಕಾಂತ ಖ್ಯಾತ ಅ.ಪಕೌಸಲ್ಯಾತ್ಮಜಾತನೆನಿಸಿದ ಶ್ರೀ ರಾಮಚಂದ್ರಕೌಶಿಕನೊಳ್ ವಿದ್ಯ ಪಠಿಸಿದಾ ವೈಶ್ವಾನರನಸಾಕ್ಷಿಯಿಂದ ವಸುಧೆಸುತೆಯ ಒಲಿಸಿ ತಂದಕೀಶಬಲನ ಕೂಡಿ ಬಂದು ಆ ದಶಾಸ್ಯನನ್ನೆ ಗೆಲಿದಾ 1
ದೇವಕೀಯ ತನಯನೆನಿಸುತಾ ಶ್ರೀಕೃಷ್ಣವನದಿಗೋವುಗಳನು ಮೇಸಿ ಚಲಿಸುತಾಹಾವಿನ್ಹೆಡೆಯ ತುಳಿದು ನಲಿದುಗೋವರ್ಧನವ ಸೆಳೆದು ಬಡಿದು ಮಾವಕಂಸನ್ನ ಗೆಲಿದು ದೇವಿ ರುಕ್ಮಿಣಿಯನು ತಂದ 2
ಬಕುಳದೇವಿದತ್ತಪುತ್ರನೂ ಶ್ರೀ ವೆಂಕಟೇಶಸುಖದಿ ತಿರುಪತಿಯೊಳು ನಿಂತನೂಯುಕುತಿಯಿಂದ ಪದ್ಮಾವತಿಯ ಸಕಲವೈಭವದಲಿ ವರಿಸಿ ಭಕುತರನ್ನ ಪೊರೆವ ಗೋವಿಂದದಾಸನೊಡೆಯನಿವನೂ 3
*******

No comments:
Post a Comment