Friday, 8 November 2019

ಈ ವಸುಧೆಯೊಳೆಲ್ಲರಿಗಿಂತ ಕೃಷ್ಣನು ankita pranesha vittala

by ಪ್ರಾಣೇಶದಾಸರು
ಈ ವಸುಧೆಯೊಳೆಲ್ಲರಿಗಿಂತ ಕೃಷ್ಣನು ಆವುದರಿಂದಧಿಕಾ ಪ

ವಾರಿಧಿಮನೆಯಲ್ಲೆ ಈಗಿನರಸರಿಗೆ |ನೀರೊಳಗೇಸೊಂದು ಊರಿಲ್ಲವೇ ||ಶಾಙ್ರ್ಗ ಧನುವಾದರೇನು ದುರ್ಲಭವಲ್ಲ |ಧಾರಿಣಿಯೊಳು ಮನೆ ಮನೆಯಲ್ಲಿ ಕಾರ್ಮುಖವು 1

ಲೇಸೇನು ಕೌಸ್ತುಭವೊಂದೆಯೇ ಮಣಿಗಳು |ಏಸೊಂದಿಲ್ಲದೆ ಭಾಗ್ಯವಂತರಲ್ಲಿ ||ಶೇಷನ ಹಾಸಿಗೆ ಹಾವಾಡಿಸಿ ಹೊಟ್ಟೆ |ಪೋಷಿಸಿಕೊಳ್ಳರೆ ಗಾರುಡಿಗರೆಲ್ಲ 2

ಪೀತಾಂಬರಂತು ಎಲ್ಲರಿಗಿಹದು ದೊಡ್ಡ |ಮಾತಲ್ಲ ವನಮಾಲೆವೈಜಯಂತಿ||ಖ್ಯಾತಿಗೆ ಶಂಖಚಕ್ರವು ಹೇಳಿಕೊಳ್ಳಲು |ಜಾತಿಕಾರಗಿಲ್ಲೇ ಬಡಿವಾರವೇತಕೆ3

ಶ್ರೀವತ್ಸ ಶ್ರೀವತ್ಸವೆಂಬರು ಮಂದೆಲ್ಲ |ಆವ ಹುಣ್ಣಿನ ಕಲೆಯಾಗಿಹದೋ ||ಆವಾನಿ ಹಯರಥ ಮುದಿಹದ್ದುಯೇರುವ |ಕೋವಿದರೆಲ್ಲೇನು ನೋಡಿ ವಂದಿಸುವರೋ 4

ವೈಕುಂಠ ಮೊದಲಾದ ಮೂರೇ ಊರವನಿಗೆ |ಲೋಕದೊಳರಸರಿಗೇಸೋ ವೂರು ||ಶ್ರೀಕಾಂತ ಪ್ರಾಣೇಶ ವಿಠಲನ ಸಂಗ |ಬೇಕೆಂದು ಬಯಸುವರೆಲ್ಲರೂ ತಿಳಿಯದೆ 5
*******

No comments:

Post a Comment