Sunday 19 December 2021

ನಮ್ಮಮ್ಮ ಶಾರದೇ ಉಮಾ ಮಹೇಶ್ವರೀ ನಿಮ್ಮೊಳಗಿಹ ankita neleyadikeshava NAMMAMMA SHARADE UMMAHESHWARNIMMOLAGIHA





ನಮ್ಮಮ್ಮ ಶಾರದೇ ಉಮಾ ಮಹೇಶ್ವರೀ ।
ನಿಮ್ಮೊಳಗಿಹನ್ಯಾರಮ್ಮಾ ।। ಪಲ್ಲವಿ ।।

ಕಮ್ಮಗೋಲನ ವೈರಿ ಸುತನಾದ ಸೊಂಡಿಲ ।
ಹೆಮ್ಮಯ್ಯ ಗಣನಾಥನೇ ಅಮ್ಮಯ್ಯ ।। ಆ. ಪ ।।

ಮೊರೆಕಪ್ಪಿನ ಭಾವ ಮೊರದಗಲ ಕಿವಿ ।
ಕೋರೆದಾಡಿಯನ್ಯಾರಮ್ಮ ।
ಮೂರು ಕಣ್ಣಿನ ಸುತ ಮುರಿದಿಟ್ಟ ಚಂದ್ರನ ।
ಧೀರ ತಾ ಗಣನಾಥನೇ ಅಮ್ಮಯ್ಯ ।। ಚರಣ ।।

ಉಟ್ಟದಟ್ಟಿಯು ಬಿಗಿದುಟ್ಟ ಚಲ್ಲಣದ ।
ದಿಟ್ಟ ತಾನಿವನ್ಯಾರಮ್ಮ ।
ಪಟ್ಟದರಾಣಿ ಪಾರ್ವತಿಯ ಕುಮಾರ ।
ಹೊಟ್ಟೆಯ ಗಣನಾಥನೇ ಅಮ್ಮಯ್ಯ ।। ಚರಣ ।।

ರಾಶಿ ವಿದ್ಯೆಯ ಬಲ್ಲ ರಮಣಿ ಹಂಬಲನೊಲ್ಲ ।
ಭಾಷಿಗನಿವನ್ಯಾರಮ್ಮ ।
ಲೇಸಾಗಿ ಸುಜನರ ಸಲಹುವ ನೆಲೆಯಾದಿ ।
ಕೇಶವನ ದಾಸ ಕಣೇ ಅಮ್ಮಯ್ಯ ।। ಚರಣ ।।
***

nammammA shArade umA mahEshwarI
nimmoLagihanArammA ||pa||

kammagOlana vairi sutanAda so0Dila
hemmeya gaNanAthanE ||apa||

mOre kappina bhAva moradagalada kivi
kOredADeyanArammA
mUrukaNNana suta muridiTTa cha0drana
dhIra tA gaNanAthanE ammayya ||1||

uTTa pachcheya bigiduTTa chellaNada
diTTa tAnivanArammA
paTTada rANi pArvatiya kumAranu
hoTTeya gaNanAthanE ammayya ||2||

raashi vidyeya balla ramaNi haMbalanolla
bhaaShiganivanyaaramma
lEsAgi janara salahuva
kAginele AdikEshava dAsa kaNE ammayya ||3||
***



Nammamma sharade uma maheshwari
Nimmolagihanaramma ||

Kammagolana vairi sutanada sondila
Hemmeya gananathane ||

More kappina bhava moradagalada kivi
Kore dadeya naramma
Murukannana suta muriditta chandrana
Dhira ta gananathane ammayya ||1||


Utta tattiya bigidutta chellanada
Ditta tanivanaramma
Pattada rani parvatiya kumaranu
Hotteya gananathane ammayya ||2||

Raashi vidyeya balla ramani hambalanolla
Bhaashiganivanyaaramma
Lesagi janara salahuva
Kaginele adikeshava dasa kane ammayya ||3||
***

ರಾಗ : ದರ್ಬಾರ್  ತಾಳ : ಅಟ್ಟ (raga, taala may differ in audio)

ನಮ್ಮಮ್ಮ ಶಾರದೆ (ಗಣನಾಥ)   
ನಮ್ಮಮ್ಮ ಶಾರದೆ ಉಮಾಮಹೇಶ್ವರಿ 
ನಿಮ್ಮೊಳಗಿಹನಾರಮ್ಮ |ಪ| 

ಕಮ್ಮಗೋಲನ ವೈರಿ ಸುತನಾದ 
ಸೊಂಡಿಲ ಹೆಮ್ಮೆಯ ಗಣನಾಥನೆ |ಅ.ಪ|   

ಮೋರೆ ಕಪ್ಪಿನ ಭಾವ ಮೊರದಗಲದ ಕಿವಿ ಕೋರೆ ದಾಡೆಯನಾರಮ್ಮ ಮೂರುಕಣ್ಣನ ಸುತ ಮುರಿದಿಟ್ಟ ಚಂದ್ರನ ಧೀರ ತಾ ಗಣನಾಥನೆ ||೧|| 

ಉಟ್ಟದಟ್ಟಿಯು ಬಿಗಿದುಟ್ಟ ಚೆಲ್ಲಣದ ದಿಟ್ಟ ತಾನಿವನಾರಮ್ಮ ಪಟ್ಟದ ರಾಣಿ ಪಾರ್ವತಿಯ ಕುಮಾರನು ಹೊಟ್ಟೆಯ ಗಣನಾಥನೆ ||೨||   

ರಾಶಿವಿದ್ಯೆಯ ಬಲ್ಲ ರಮಣೀ ಹಂಬಲನೊಲ್ಲ ಭಾಶಿಗನಿವನಾರಮ್ಮ ಲೇಸಾಗಿ ಜನರ ಸಲಹುವ ಕಾಗಿನೆಲೆಯಾದಿ ಕೇಶವದಾಸ ಕಾಣೆ ||೩||
***********


No comments:

Post a Comment