ರಾಘ : ಕಲ್ಯಾಣಿ ತಾಳ : ಝಂಪೆ
ಕುಂಜಾರುಗಿರಿ ಶ್ರೀ ದುರ್ಗಾಪರಮೇಶ್ವರಿ ಅಮ್ಮನವರು
ಕುಂಜಾರುಗಿರಿ ಶ್ರೀ ದುರ್ಗಾಪರಮೇಶ್ವರಿ ಅಮ್ಮನವರು
ವರವ ಕೊಡು ಎನಗೆ ವಾಗ್ದೇವಿ ನಿನ್ನ
ಚರಣಕಮಲಂಗಳನ ದಯಮಾಡು ದೇವಿ ||ಪ||
ಶಶಿ ಮುಖದ ನಸುನಗೆಯ ಬಾಲೆ
ಎಸೆವ ಕರ್ಣದ ಮುತ್ತಿನೋಲೆ
ನಸುನಗುವ ಸುಲಿಪಲ್ಲ ಗುಣಶೀಲೆ ದೇವಿ
ಬಿಸಜಾಕ್ಷಿ ಎನ್ನ ಹೃದಯದೊಳು ನಿಂದು ||೧||
ಇಂಪು ಸೊಂಪಿನ ಚಂದ್ರಬಿಂಬೆ
ಕೆಂಪು ತುಟಿಗಳ ನಾಸಿಕದ ರಂಭೆ
ಜೋಂಪು ಮದನನ ಪೂರ್ಣಶಕ್ತಿ ಗೊಂಬೆ ಒಳ್ಳೆ
ಸಂಪಿಗೆಯ ಮುಡಿಗಿಟ್ಟು ರಾಜಿಪ ಶಾರದಾಂಬೆ ||೨||
ರವಿಕೋಟಿ ತೇಜಪ್ರಕಾಶೇ ಮಹಾ
ಕವಿಜನರ ಹ್ರಿತ್ಕಮಲ ವಾಸೇ
ಅವಿರಳಪುರಿಯ ಸಿರಿಕಾಗಿನೆಲೆಯಾದಿ ಕೇ
ಶವನ ಸುತನಿಗೆ ಸನ್ನುತ ರಾಣಿವಾಸೆ ||೩||
******
No comments:
Post a Comment