Wednesday, 16 October 2019

ಡಿಂಬದಲ್ಲಿರುವ ಜೀವ ಕಂಬಸೂತ್ರ ಗೊಂಬೆಯಂತೆ ankita neleyadikeshava DIMBADALLIRUVA JEEVA KAMBASOOTRA GOMBEYANTE



ಡಿಂಬದಲ್ಲಿರುವ ಜೀವ ಕಂಬಸೂತ್ರ ಗೊಂಬೆಯಂತೆ||2||
ಎಂದಿಗಾದರೊಂದು ದಿನ ಸಾವು ತಪ್ಪದೂ...||2||
ಸಾವು ತಪ್ಪದು....ಸಾವು ತಪ್ಪದೂ

ಹುಟ್ಟುತೇನು ತರಲಿಲ್ಲ ಸಾಯುತೇನು ಒಯ್ಯಲಿಲ್ಲ||2||
ಸುಟ್ಟು ಸುಟ್ಟು ಸುಣ್ಣದ ಹರಳಾಯಿತೀ ದೇಹ||2||
ಹೊಟ್ಟೆ ಬಲುಕೆಟ್ಟದೆಂದು ಎಷ್ಟು ಕಷ್ಟ ಮಾಡಿದರು||2||
ಬಿಟ್ಟು ಹೋಗುವಾಗ ಗೇಣು ಬಟ್ಟೆ ಕಾಣದು||4||
                                       ||ಡಿಂಬದಲ್ಲಿರುವ||
ಹತ್ತು ಎಂಟು ಲಕ್ಷ ಗಳಿಸಿ ಮತ್ತೆ ಸಾಲದೆಂದು ಪರರ||2||
ಅರ್ಥಕ್ಕಾಗಿ ಆಸೆಪಟ್ಟು ಸುಳ್ಳು ನ್ಯಾಯ ಮಾಡ್ವರು||2||
ಬಿತ್ತಿ ಬೆಳೆದು ತನ್ನದೆಂಬ ವ್ಯರ್ಥಚಿಂತೆಯನ್ನು ಮಾಡೆ||2||
ಸತ್ತು ಹೋದ ಮೇಲೆ ಅರ್ಥ ಯಾರಿಗಾಹುದೊ||4||
                                         ||ಡಿಂಬದಲ್ಲಿರುವ||
ಹೊನ್ನು ಹೆಣ್ಣು ಮಣ್ಣು ಮೂರು ತನ್ನಲಿದ್ದು ಉಣ್ಣಲಿಲ್ಲ||2||
ಅಣ್ಣತಮ್ಮ ತಾಯಿ ತಂದೆ ಬಯಸಲಾಗದು||2||
ಅನ್ನ ವಸ್ತ್ರ ಭೋಗಕ್ಕಾಗಿ ತನ್ನ ಸುಖವ ಕಾಣಲಿಲ್ಲ||2||
ಮಣ್ಣುಪಾಲು ಆದಮೇಲೆ ಯಾರಿಗಾಹುದೊ||4||
                                           ||ಡಿಂಬದಲ್ಲಿರುವ||
ಬೆಳ್ಳಿ ಬಂಗರಿಟ್ಟುಕೊಂಡು ಒಳ್ಳೆ ವಸ್ತ್ರ ಹೊದ್ದುಕೊಂಡು||2||
ಚಳ್ಳಪಿಳ್ಳ ಗೊಂಬೆಯಂತೆ ಆಡಿ ಹೋದೆನೆ||2||
ಹಳ್ಳ ಹರಿದು ಹೋಗುವಾಗ ಗುಳ್ಳೆ ಒಂದು ಒಡೆಯುವಂತೆ||2||
ಗುಳ್ಳೆ ಪೊರೆಯಂತೆ ಕಾಣೊ ಸಂಸಾರದಾಟ||4||
                                       ||ಡಿಂಬದಲ್ಲಿರುವ||
ವಾರ್ತೆ ಕೀರ್ತಿಯೆಂಬುವೆರಡು ಸತ್ತ ಮೇಲೆ ಬಂದವಯ್ಯ||2||
ವಸ್ತು ಪ್ರಾಣನಾಯಕನು ಎಲ್ಲಿ ದೊರಕ್ಯಾನು||2||
ಕರ್ತೃ ಕಾಗಿನೆಲೆಯಾದಿಕೇಶವನ ಚರಣಕಮಲ||2||
ನಿತ್ಯದಲ್ಲಿ ಭಜಿಸಿ ಸುಖಿಯಾಗಿ ಬಾಳೆಲೊ||4||
                                       ||ಡಿಂಬದಲ್ಲಿರುವ||
***

ದಿಂಬದಲ್ಲಿರುವ ಜೀವ ಕಂಬ ಸೂತ್ರ ಗೊಂಬೆಯಂತೆ,
ಎಂದಿಗಾದರೊಂದು ದಿನ ಸಾವು ತಪ್ಪದ್ದೊ ,
ಎಂದಿಗಾದರೊಂದು ದಿನ ಸಾವು ತಪ್ಪದ್ದೊ

ಹುಟ್ಟುತ್ತೇನೆ ತರಲಿಲ್ಲ ,ಸಾಯುತೇನು ಒಯ್ಯಲಿಲ್ಲ
ಸುಟ್ಟು ಸುಟ್ಟು ಸುಣ್ಣದಗಳು ಆಯಿತೀ ದೇಹ.
ಹೊಟ್ಟೆ ಬಲು ಕೆಟ್ಟದೆಂದು ಎಷ್ಟು ಕಷ್ಟ ಮಾಡಿದರು
ಬಿಟ್ಟು ಹೋಗುವಾಗ ಗೇಣು ಬಟ್ಟೆ ಕಾಣರೋ

ಹತ್ತು ಎಂಟು ಲಕ್ಷ ಗಳಿಸಿ ಮತ್ತೆ ಸಾಲದೆಂದು ಪರರ
ಅರ್ಥಕ್ಕಾಗಿ ಆಸೆ ಪಟ್ಟು ನ್ಯಾಯ ಮಾಡ್ವರೋ
ಬಿಟ್ಟಿ ಬೆಳೆಸು ತನ್ನದೆಂದು ವ್ಯರ್ಥ ಚಿಂತೆಯನ್ನು ಮಾಡಿ
ಸತ್ತು ಹೋದ ಮೇಲೆ ಅರ್ಥ ಯಾರಿಗಾಗುದೋ.

ಹೆಣ್ಣು ಹೊನ್ನು ಮಣ್ಣು ಮೂರು ತನ್ನಲಿದ್ದೂ ಉಣ್ಣಲಿಲ್ಲ
ಅಣ್ಣ ತಮ್ಮ ತಾಯಿ ತಂದೆ ಬಯಸಲಾಗದೊ
ಅನ್ನಾ ವಸ್ತ್ರ ಭೋಗಕ್ಕಾಗಿ ತನ್ನ ಸುಖವ ಕಾಣಲಿಲ್ಲ
ಮಣ್ಣು ಪಾಲು ಆದ ಮೇಲೆ ಯಾರಿಗಾಗುದೋ

ಬೆಳ್ಳಿ ಬಂಗಾರಿಟ್ತುಕೊಂಡು ಒಳ್ಳೇ ವಸ್ತ್ರ ಹೊದ್ದುಕೊಂಡು
ಚಳ್ಳ್ ಪಿಳ್ಳ್ ಗೊಂಬೆಯಂತೆ ಆಗಿ ಹೋದೆನೇ
ಹಳ್ಳ ಹರಿದು ಹೋಗುವಾಗ ಗುಳ್ಳೆ ಬಂದು ಒಡೆಯುವಂತೆ
ಗುಳ್ಳೆ ಪೊರೆಯಂತೆ ಕಾಣೊ ಸಂಸಾರದಾಟ

ವಾರ್ತೆ ಕೀರ್ತಿ ಎಂಬೋ ಎರಡು ಸತ್ತ ಮೇಲೆ ಬಂದವಯ್ಯ
ವಸ್ತು ಪ್ರಾಣ ನಾಯಕನು ಹ್ಯಾಂಗೆ ದೊರಕುವನೋ
ಕರ್ತೃ ಕಾಗಿನೆಲೆಯಾದಿ ಕೇಶವನ ಚರಣ ಕಮಲ
ನಿತ್ಯದಲಿ ಭಜಿಸಿ ಸುಖೀಯಾಗಿ ಬಾಳೇಲೋ
ಸುಖೀಯಾಗಿ ಬಾಳೇಲೋ
***


Dimbadalli iruva jiva kambasutra gombeyante
Endigadarondu dina savu tappadu || pa ||

Huttutenu taralilla sayutenu oyyalilla
Suttu suttu sunnada haralayiti deha
Hotte balu kettadendu eshtu kashta madidaru
Bittu hoguvaga genu batte kanadu || 1 ||

Hattu entu laksha galisi matte saladendu parara
Arthakagi asepattu nyaya madvaru
Bitti beledu tannademba vyarthachinteyannu made
Sattu hoda mele artha yarigahudo || 2 ||

Hennu honnu mannu muru tannaliddu unnalilla
Anna tamma tayi tande bayasalagadu
Anna vastra bogakagi tanna sukava kanalilla
Mannupalu adamele yarigahudo || 3 ||

Belli bangarittukondu olle vastra hoddukomdu
Calla pilla gombeyante adi hodane
Halla haridu hoguvaga gulle bandu odeyuvante
Gulle poreyante kano samsaradata || 4 ||

Varte kirtiyembuveradu satta mele bandavayya
Vastu prananayakanu hyange dorakuvano
Kartru kagineleyadikesavana charanakamala
Nityadalli Bajisi sukiyagi baliro || 5 ||
***

ರಚನೆ : ಶ್ರೀ ಕನಕ ದಾಸರು

ಡಿಂಬದಲ್ಲಿರುವ ಜೀವ ಕಂಬ ಸೂತ್ರ ಗೊಂಬೆಯಂತೆ,
ಎಂದಿಗಾದರೊಂದು ದಿನ ಸಾವು ತಪ್ಪದ್ದೊ ,
ಎಂದಿಗಾದರೊಂದು ದಿನ ಸಾವು ತಪ್ಪದ್ದೊ

ಹುಟ್ಟುತ್ತೇನೆ ತರಲಿಲ್ಲ ,ಸಾಯುತೇನು ಒಯ್ಯಲಿಲ್ಲ
ಸುಟ್ಟು ಸುಟ್ಟು ಸುಣ್ಣದಗಳು ಆಯಿತೀ ದೇಹ.
ಹೊಟ್ಟೆ ಬಲು ಕೆಟ್ಟದೆಂದು ಎಷ್ಟು ಕಷ್ಟ ಮಾಡಿದರು
ಬಿಟ್ಟು ಹೋಗುವಾಗ ಗೇಣು ಬಟ್ಟೆ ಕಾಣರೋ

ಹತ್ತು ಎಂಟು ಲಕ್ಷ ಗಳಿಸಿ ಮತ್ತೆ ಸಾಲದೆಂದು
ಪರರ ಅರ್ಥಕ್ಕಾಗಿ ಆಸೆ ಪಟ್ಟು ನ್ಯಾಯ ಮಾಡ್ವರೋ
ಬಿಟ್ಟಿ ಬೆಳೆಸು ತನ್ನದೆಂದು ವ್ಯರ್ಥ ಚಿಂತೆಯನ್ನು ಮಾಡಿ
ಸತ್ತು ಹೋದ ಮೇಲೆ ಅರ್ಥ ಯಾರಿಗಾಗುದೋ.

ಹೆಣ್ಣು ಹೊನ್ನು ಮಣ್ಣು ಮೂರು ತನ್ನಲಿದ್ದೂ ಉಣ್ಣಲಿಲ್ಲ
ಅಣ್ಣ ತಮ್ಮ ತಾಯಿ ತಂದೆ ಬಯಸಲಾಗದೊ
ಅಣ್ಣ ವಸ್ತ್ರ ಭೋಗಕ್ಕಾಗಿ ತನ್ನ ಸುಖವ ಕಾಣಲಿಲ್ಲ
ಮಣ್ಣು ಪಾಲು ಆದ ಮೇಲೆ ಯಾರಿಗಾಗುದೋ

ಬೆಳ್ಳಿ ಬಂಗಾರಿಟ್ತುಕೊಂಡು ಒಳ್ಳೇ ವಸ್ತ್ರ ಹೊದ್ದುಕೊಂಡು
ಚಳ್ಳ್ ಪಿಳ್ಳ್ ಗೊಂಬೆಯಂತೆ ಆಗಿ ಹೋದೆನೇ
ಹಳ್ಳ ಹರಿದು ಹೋಗುವಾಗ ಗುಳ್ಳೆ ಬಂದು ಒಡೆಯುವಂತೆ
ಗುಳ್ಳೆ ಪೊರೆಯಂತೆ ಕಾಣೊ ಸಂಸಾರದಾಟ

ವಾರ್ತೆ ಕೀರ್ತಿ ಎಂಬೋ ಎರಡು ಸತ್ತ ಮೇಲೆ ಬಂದವಯ್ಯ
ವಸ್ತು ಪ್ರಾಣ ನಾಯಕನು ಹ್ಯಾಂಗೆ ದೊರಕುವನೋ
ಕರ್ತೃ ಕಾಗಿನೆಲೆಯಾದಿ ಕೇಶವನ ಚರಣ ಕಮಲ
ನಿತ್ಯದಲಿ ಭಜಿಸಿ ಸುಖೀಯಾಗಿ ಬಾಳೇಲೋ
ಸುಖೀಯಾಗಿ ಬಾಳೇಲೋ
*********

No comments:

Post a Comment