ಪಾವನ ಮಾಳ್ಪುದು ನಾಮಾಮೃತ ರಸ ಪಾವನ ಮಾಡುವುದು
ರಾಗ - : ತಾಳ -
ಪಾವನ ಮಾಡುವದು ನಾಮಾಮೃತ ರಸ l
ಪಾವನಮಾಡುವದು ll ಪ ll
ಪಾವನಮಾಳ್ಪುದು ನಾಮಸ್ಮರಣೆಯು l
ಭೂವಲಯದೊಳು ಈವುದಿಷ್ಟಾರ್ಥವ ll ಅ ಪ ll
ಶ್ರೀನಿವಾಸನಾ ನಾಮ ಸುಧಾರಸ l
ಏನು ರುಚಿಯೊ ಕಾಣೆ ಜೇನು ತುಪ್ಪದಂತೆ ll 1 ll
ಸಕ್ಕರೆ ಬೆರೆಸಿದ ಚೊಕ್ಕಪಾನಕದಂತೆ l
ಮುಕ್ಕು ಮಾಣಿಸುತಿದೆ ರಕ್ಕಸಾರಿ ಧ್ಯಾನ ll 2 ll
ಕದಳಿ ಖರ್ಜೂರ ದ್ರಾಕ್ಷಿ ಇದಕೂ ಇಮ್ಮಿಗಿಲಾಗಿ l
ಮುದಕೊಡುವದು ಜಿಹ್ವೆಗೊದಗಿದ ತತ್ ಕ್ಷಣ ll 3 ll
ಕಾಸಿದ ಕೆನೆಪಾಲ ದೂಷಿಸುವಂತಿದೆ l
ಏಸು ರುಚಿಯೊ ಹರಿದಾಸರೆಲ್ಲರಿಗೆ ll 4 ll
ಹಯವದನನ ನಿರ್ಭಯದಿಂ ಭಜಿಸಲು l
ದಯಮಾಡುವ ಸಾಯುಜ್ಯ ಪದವನಿತ್ತು ll 5 ll
check lyrics of English'
pallavi
pAvana mALpudu nAmAmrta rasa pAvana mAduvudu
anupallavi
pAvana mALpudu nAma smaraNeyu bhAvalayadoLIvudu ishTArthava
caraNam 1
shrInivAsana shri nAma sudhArasa Enu ruciyo kANe jEnutuppadante
caraNam 2
hayavadanana nirbhayadim bhajisalu dayamADuva sAyujya padaviyanittu
***
No comments:
Post a Comment