Friday, 3 December 2021

ಹರಿಕಥಾ ಶ್ರವಣ ಮಾಡೊ ಪಥ ವೈಕುಂಠಕಿದು ankita vijaya vittala HARIKATHA SHRAVANA MAADO PATHA VAIKUNTAKIDU

sung as vijaya vittala ankita

 

SUNG AS VIJAYA VITTALA ANKITA





 TO CHECK - IS THIS VIJAYADASA KRUTI? or PURANDARA DASA KRUTI

ಹರಿಕಥಾ ಶ್ರವಣ ಮಾಡೋ ||ಪ||
ಪಥಾ ವೈಕುಂಠಕ್ಕಿದು ನೋಡೋ ||ಅಪ||

ಪತಿತ ಪಾವನನ ಪದಾಬ್ಜದಲ್ಲಿ | 
ಹಿತದಿಂದ ಭಕುತಿಯ ಮಾಡೋ ||೧||

ಜ್ಞಾನ ಭಕುತಿ ವೈರಾಗ್ಯವ ನೀವ | 
ಆನಂದ ತೀರ್ಥರ ಪಾಡೋ ||೨||

ಅಜಭವಾದಿಗಳ ಅರಸನಾದ | 
ಶ್ರೀ ವಿಜಯ ವಿಠಲನ ಸೇರೋ ||೩||
***

harikathA SravaNa mADO ||pa||
pathA vaikuMThakkidu nODO ||apa||
 
patita pAvanana padAbjadalli | 
hitadiMda Bakutiya mADO ||1||
 
j~jAna Bakuti vairAgyava nIva | 
AnaMda tIrthara pADO ||2||
 
ajaBavAdigaLa arasanAda | 
sri vijaya viThalana sErO ||3||
***

pallavi

kathA shravaNa mADO harikatha shravaNa mADO

anupallavi

patha vaikuNThakkidu nOdO

caraNam 1

patita pAvanana pAdAbjadalli hitadinda bhakutiya mADO

caraNam 2

jnAna bhakuti vairAgyava nIva Ananda tIrthara pADO

caraNam 3

aja bhavAdigala arasanAda shrI vijaya viTTalana bedO
***


ಹರಿಕಥಾಶ್ರವಣ ಮಾಡೋ, ಪಾಡೋ
ಹರಿಕಥಾ ಶ್ರವಣ ಮಾಡೋ ||ಪ||
ಪಥ ವೈಕುಂಠಕಿದು ನೋಡೋ ||ಅ||

ಸರಸಿಜನಾಭನ ಸರ್ವದಾ ಹೊಗಳುತ
ದುರಿತ ದೂರಕಿಡಾಡೋ ||

ಧ್ಯಾನ ಭಕುತಿ ವೈರಾಗ್ಯವೀವ ನಮ್ಮ
ಆನಂದತೀರ್ಥರ ಪಾಡೋ ||

ಪರಮಪುರುಷ ಶ್ರೀಪುರಂದರವಿಠಲನ
ಚರಣಕಮಲದಲಿ ಕೂಡೋ ||
****


ರಾಗ ಯಮುನಾಕಲ್ಯಾಣಿ. ಆದಿ ತಾಳ (raga, taala may differ in audio)


ಹರಿಕಥಾ ಶ್ರವಣ ಮಾಡೊ ನಿರಂತರ
ಪರಗತಿಗಿದು ನಿರ್ಧಾರ ನೋಡೊ ಪ.

ಸರಸಿಜನಾಭನ ಸರ್ವದಾ ಹೊಗಳುತದುರಿತದೊರಕೀಡಾಡೊ -ಮನುಜಾ1

ಜ್ಞಾನ  - ಭಕುತಿ - ವೈರಾಗ್ಯವೀವ ನಮ್ಮಆನಂದತೀರ್ಥರ ಪಾಡೊ ಮನುಜಾ 2

ಪರಮ ಪುರುಷ ಶ್ರೀ ಪುರಂದರವಿಠಲನಚರಣ ಕಮಲಗಳ ಕೂಡೊ - ಮನುಜಾ 3
****
ಕಥಾಶ್ರವಣ ಮಾಡೋ ಪಾಡೋ ಹರಿ ||ಪ||
ಪಥ ವೈಕುಂಠಕ್ಕಿದು ನೋಡೋ ||ಅ||

ಪತಿತಪಾವನ ಪಾದಾಬ್ಧದಲಿ
ಹಿತದಿಂದ ಭಕುತಿಯ ಮಾಡೋ ||೧||

ಜ್ಞಾನ ಭಕುತಿ ವೈರಾಗ್ಯವೀವ
ಆನಂದತೀರ್ಥರ ಪಾಡೋ     ||೨||

ಅಜಭವಾದಿಗಳಿಗರಸನಾದ ಸಿರಿ
ವಿಜಯವಿಠಲನ ನೋಡೋ    ||೩||
********


No comments:

Post a Comment