Sunday 5 December 2021

ವಸುದೇವ ಸುತನಿಗೆ ನಮೋ ನಮೋ ankita bheemesha krishna VASUDEVA SUTANIGE NAMO NAMO



ವಸುದೇವ ಸುತನಿಗೆ ನಮೋ ನಮೋ

ನಮ್ಮ ವಸುಧೆ ಪಾಲಕನಿಗೆ ನಮೋ ನಮೋ || pa ||


ಮಚ್ಚಾವತಾರಗೆ ಮೊದಲೆ ಮಂಗಳವೆಂದು

ಸಾಕ್ಷಾತ ಕೂರ್ಮಗೆ ನಮೋ ನಮೋ

ಸುತ್ತಿ ಸುರುಳಿ ಭೂಮಿ ಒಯ್ದ್ಹಿರಣ್ಯಾಕ್ಷನ

ಪ್ರಾಣ್ಹತ್ಯ ಮಾಡಿದ ವರಾಹ ನಮೋ ನಮೋ || 1 ||


ಕೂಸು ಕರೆಯೆ ಕಂಬದಿಂದ ಬಂದ್ಹಿರಣ್ಯ-

ಕಶ್ಯಪನ ಕೊಂದ್ಹರಿಗೆ ನಮೋ ನಮೋ

ಆಕಾಶವ್ಹಿಡಿಯದೆ ಬೆಳದು ಬಲಿಯ ಭಾಗ್ಯ

ಆಕ್ರಮಿಸಿದಾತಗೆ ನಮೋ ನಮೋ   || 2||


ಪೊತ್ತು ಕೊಡಲಿ ಕ್ಷತ್ರಿಯರ ಕಡಿದ 

ಸಮರ್ಥ ಭಾರ್ಗವ ನಮೋ ನಮೋ

ಹತ್ತು ಶಿರಗಳ ಕೊಂದು ಸೀತಾಸಮೇತನಾದ

ಪೃಥಿವಿ ಪಾಲಕ ರಾಮ ನಮೋ ನಮೋ   || 3 ||


ಬೆರಳಲಿ ಗೋವರ್ಧನ ಎತ್ತ್ಯಾಕಳಕಾಯ್ದ

ಕೊಳಲನೂದುವ ಕೃಷ್ಣ ನಮೋ ನಮೋ

ತರಳರೂಪದಿ ತ್ರಿಪುರದ ದುರುಳರನೆಲ್ಲ

ಮರುಳು ಮಾಡಿದ ಬೌದ್ಧ ನಮೋ ನಮೋ   || 4 ||


ಮುದ್ದು ತೇಜಿಯನೇರಿ ಕಲಿಗಳ ಕಡಿದಂಥ

ಕಲ್ಕ್ಯಾವತಾರಗೆ ನಮೋ ನಮೋ

ಶುದ್ಧ ವೈಷ್ಣವರಿಗೆ ಸುಲಭದಿಂದೊಲಿದು 

ಮುಕ್ತಿ ಕೊಡುವೊ ಭೀಮೇಶ ಕೃಷ್ಣಗೆ ನಮೋ ನಮೋ   || 5 ||

***


Vasudēva sutanige namō namō


nam’ma vasudhe pālakanige namō namō || pa ||


maccāvatārage modale maṅgaḷavendu


sākṣāta kūrmage namō namō


sutti suruḷi bhūmi oyd’hiraṇyākṣana


prāṇhatya māḍida varāha namō namō || 1 ||


kūsu kareye kambadinda band’hiraṇya-


kaśyapana kond’harige namō namō


ākāśavhiḍiyade beḷadu baliya


bhāgya ākramisidātage namō namō   || 2||


pottu koḍali kṣatriyara kaḍida 


samartha bhārgava namō namō


hattu śiragaḷa kondu sītāsamētanāda


pr̥thivi pālaka rāma namō namō   || 3 ||


beraḷali gōvardhana ettyākaḷakāyda


koḷalanūduva kr̥ṣṇa namō namō


taraḷarūpadi tripurada duruḷaranella


maruḷu māḍida baud’dha namō namō   || 4 ||


muddu tējiyanēri kaligaḷa kaḍidantha


kalkyāvatārage namō namō


śud’dha vaiṣṇavarige sulabhadindolidu 


mukti koḍuvo bhīmēśa kr̥ṣṇage namō namō   || 5 ||

***


No comments:

Post a Comment