Sunday, 5 December 2021

ಮಕ್ಕಳ ಮಾಣಿಕವೆ ಮನೋಹರ ನಿಧಿಯೆ purandara vittala MAKKALA MAANIKAVE MANOHARA NIDHIYE



ಮಕ್ಕಳ ಮಾಣಿಕವೆ ಮನೋಹರ ನಿಧಿಯೆ ವೈರಿ-
ರಕ್ಕಸ ಶಕಟನ ತುಳಿದುದೀ ಪಾದವೆ ||ಪ||

ಬಲಿಯ ದಾನವ ಬೇಡಿ ನೆಲನ ಈರಡಿ ಮಾಡಿ
ಜಲಧಿಯ ಪಡೇದದ್ದೀ ಪಾದವೆ ಕೃಷ್ಣ
ಹಲವು ಕಾಲಗಳಿಂದ ಶಿಲೆ ಶಾಪ ಪಡೆದಿರಲು
ಫಲಕಾಲಕ್ಕೊದಗಿದ್ದುದೀ ಪಾದವೆ ಕೃಷ್ಣ ||

ಕಡು ಕೋಪದಿಂದ ಕಾಳಿಂಗನ ಮಡುವ ಕಲಕಿ
ಹೆಡೆಯನ್ನು ತುಳಿದದ್ದೀ ಪಾದವೆ ಕೃಷ್ಣ
ಸಡಗರದಿ ಕೌರವನ ಸಿಂಹಾಸನವನು
ಹೊಡೆಮಗುಚಿ ಕೆಡಹಿದ್ದೀ ಪಾದವೆ ಕೃಷ್ಣ ||

ಶೃಂಗಾರದಿಂದಾರು ಹೆಂಗಳ ಸಹಿತ ಶ್ರೀ-
ಅಂಗನೆಯೊತ್ತುವದೀ ಪಾದವೆ ಕೃಷ್ಣ
ಸಂಗ ಸುಖದಿ ಶ್ರೀ ಪುರಂದರವಿಠಲನೆ
ಅಂಗದೊಳಗಡಗಿದ್ದುದೀ ಪಾದವೆ ಕೃಷ್ಣ 
***

ರಾಗ ಮುಖಾರಿ. ಅಟ ತಾಳ (raga tala may differ in audio)

pallavi

makkaLa mANikave manOhara nidhiye vairi rakkasa shakaTana tuLidudI pAdave

caraNam 1

baliya dAnava bEDi nelana IraDi mADi jaladhiya paDEdaddI pAdave krSNa
halavu kAlagaLinda shile pApa paDediralu bala kAlakkodagiddudI pAdave krSNa

caraNam 2

kaDu kOpadinda kALingana maDuva kalaki heDeyannu tuLidaddI pAdave krsNa
saDagaradi kauravana simhAsanavanu hoDemaguci keDahiddI pAdave krSNa

caraNam 3

shrngAradindAru hengaLe sahita shrI anganeyottuvadI pAdave krSNa
sanga sukhadi shrI purandara viTTalane angadoLagaDagiddUdI pAdave krSNa
***

ಮಕ್ಕಳ ಮಾಣಿಕ ಮನೋಹರ ನಿಧಿ
ವೈರಿ ರಕ್ಕಸ ಶಕಟನ ತುಳಿದುದೀಪಾದವವೇ

ಬಲಿಯ ದಾನವ ಬೇಡಿ ನೆಲವ ಈರಡಿ ಮಾಡಿ
ಜಲಧಿಯ ಪಡೆದದ್ದು ಈ ಪಾದವೇ
ಹಲವು ಕಾಲಗಳಿಂದ ಶಿಲೆ ಶಾಪ ಪಡೆದಿರಲು
ಫಲ ಕಾಲಕ್ಕೊದಗಿದುದೀ ಪಾದವೇ

ಕಡುಕೋಪದಿ ಕಾಳಿಂಗನ ಮಡುವ ಕಲಕಿ
ಹೆಡೆಯನು ತುಳಿದುದು ಈ ಪಾದವೇ
ಸಡಗರದಿಂದ ಕೌರವನ ಸಿಂಹಾಸನವ
ಹೊಡೆ ಮುಗುಚಿ ಕೆಡಹಿದುದೀ ಪಾದವೇ

ಶೃಂಗಾರದಿಂದ ಹೆಂಗಳು ಲಕ್ಷ್ಮಿ ಸಹಿತ
ಅಂಗನೆಯರೊತ್ತುವುದೀ ಪಾದವೇ
ಸಂಗ ಸುಖದಿಂದ ಶ್ರೀ ಪುರಂದರ ವಿಠ್ಠಲನ
ಅಂಗದೊಳಡಗಿದ್ದುದೀ ಪಾದವೇ
********

No comments:

Post a Comment