Monday, 6 September 2021

ಕರುಣಿಸಿ ಪಿಡಿಯೋ ಕೈಯ್ಯಾ ಗುರು ರಾಘವೇಂದ್ರರಾಯಾ ankita shreekara vittala

 ankita ಶ್ರೀಕರವಿಠಲ  

ರಾಗ: ಮಿಶ್ರ ನಾಟ ತಾಳ: ಆದಿ


ಕರುಣಿಸಿ ಪಿಡಿಯೋ ಕೈಯ್ಯಾ ಗುರು ರಾಘವೇಂದ್ರರಾಯಾ


ನರಸಿಂಧೂರಾರಿ ದಯದಿ ವರ ಪಡೆದು ಕ್ಷೋಣಿತಳದಿ

ಪೊರೆಯುವ ಕರುಣಿ ಎಂದು ಮೊರೆಹೊಕ್ಕೆ ದೀನಬಂಧೂ 1

ಕೋರಿದರಭೀಷ್ಟವಗರೆದು ಆರೊಂದುನೂರುವರುಷ

ಸಾರಿದಾ ಜನರಾ ಪೊರೆವ ಸೂರಿಸುಧೀಂದ್ರತನಯಾ 2

ನೀನೊಲಿದಮಾತ್ರ ಮನದಿ ಮಾವಾರಿ ಪೊರೆವ ದಯದಿ

ದೇವಸ್ವಭಾವ ಜನದೀ ನೋವಾಗಗೊಡದೆ ಭವದೀ 3

ನಾ ಮಾಡಿದಪರಾಧ ನೀ ಮಾತ್ರ ಕ್ಷಮಿಸು ಬಿಡದೆ

ನಾ ಮನದಿ ಬೇಡಿಕೊಂಬೆ ಹೇ ಮಂತ್ರಮುನಿಯೆ ಧೊರೆಯೇ 4

ಜಪತಪವ ಮಾಡಲರಿಯೆ ಕುಪಥಾದೊಳಿರುವ ಎನ್ನ

ಸುಪಥವ ತೋರಿ ಸಲಹೋ ಅಪ್ಪಣಾರ್ಯಗೊಲಿದ ಪ್ರಭುವೇ 5

ನಿನ್ಹೊರತು ಪೊರೆವರನ್ನು ಇನ್ನಾರ ಕಾಣೆ ಜಗದಿ

ಮನ್ನಿಸಿ ಪೊರೆವ ದಾತ ಎನ್ನಾಣೆ ಮುನಿವರ್ಯ 6

ಸಾಗಿ ನೀ ಬಾರೊ ಎಂದು ಕೂಗುತ ಕರೆಯಕೇಳಿ

ಬೇಗಾನೆಬಂದು ಪೊರೆವೆ ಬಾಗುವೆ ನಿನ್ನ ಪದಕೆ 7

ಜನನಿಯು ತನಯನನ್ನು ಅನುನಯದಿ ಪೊರೆಯುವಂತೆ

ಮುನಿವರ್ಯ ಪ್ರಾರ್ಥಿಸುವೆ ಕ್ಷಣಬಿಡದೆ ಸಲಹೂ ತಂದೆ 8

ವಟುವೇಷಧಾರಿ ಶ್ರೀಕರವಿಠಲಾನೆ ಪರನು ಜಗದಿ

ಧಿಟನೆಂದು ಸಾರಿದಂಥಾ ವಿಠಲಾರ್ಯಗೊಲಿದಮೌನಿ 9

***


No comments:

Post a Comment