Sunday, 5 September 2021

ಸ್ಮರಿಸಿ ಸುಖಿಸೆಲೋ ಮಾನವಾ ankita ramadasa.a

 ಅಸೂರಿ ರಾಮಸ್ವಾಮಿ ಅಯ್ಯಂಗಾರ್ ankita ramadasa

ಸ್ಮರಿಸಿ ಸುಖಿಸೆಲೋ ಮಾನವಾ ಪ 


ಸರಸಿಜಾಸನ ಸತತ ನೆನೆವ ಹರಿನಾಮವನು ಅ.ಪ 


ಜವರಾಯ ಕಿಂಕರರ ಹಿಮ್ಮೆಟ್ಟಸಿದ ನಾಮ ಧ್ರುವರಾಯಗೊಲಿದ ಘನವು ಈ ನಾಮ ನವನೀತರೂಪದಿಂದ ಘನವ ತಾಳ್ದಿಹ ನಾಮ ಸುವಿಲಾಸದಿಂ ಪಾರ್ಥಗೊಲಿದಿರ್ಪನಾಮವನು 1 

ಸನಕಾದಿ ಮುನಿಗಳು ಸತತ ಭಜಿಸುವ ನಾಮ ಅನಿಲಜಾತನಿಗೊಲಿದ ಪರಮನಾಮ ವನಚಾರಿಯಾಗಿದ್ದ ಶಬರಿಗೊಲಿದ ನಾಮ ವನಚರರ ಗರುವವನು ಮುರಿಯುವ ನಾಮ 2 

ಪಾಂಚಾಲಿಗಕ್ಷಯದ ವರವನಿತ್ತಾ ನಾಮ ಪಾಂಚಜನ್ಯವ ಸಿರಿಯೊಳೆಸೆಯುತಿಹ ನಾಮ ವಂಚಕರ ಹೃದಯಗಳ ಭೇದಿಸುತ್ತಿಹನಾಮ ಚಂಚಲೆಯರುತ್ಸಾಹದಿಂ ಭಜಿಪ ನಾಮವನು 3 

ದುರುಳದೈತ್ಯರ ಮನವ ಕದಡಿ ಕಲಕುವ ನಾಮ ಶರಣಾಗತಾವಳಿಯ ಪೊರೆಯುತಿಹನಾಮ ತರಳಪ್ರಹ್ಲಾದ ತಾ ಪಿತಗೊರೆವ ನಾಮವನು 4 

ಮಾಂಗಿರೀ ವರಾಗ್ರದೊಳು ಮರೆಯುತಿಹ ಸಿರಿನಾಮ ಶೃಂಗಾರ ಶ್ರೀ ಪಾಂಡುರಂಗ ನಾಮ ಗಂಗಾಧರಾನುತ ಸುಖದಾತ ಶ್ರೀನಾಮ ಮಂಗಳಕರ ರಾಮದಾಸನುತ ನಾಮವನು 5

***


No comments:

Post a Comment