Wednesday, 1 September 2021

ಲೇಸು ಲೇಸಾಯಿತು ಭಾಸ್ಕರ ಗುರು ಕೃಪೆ ಲೇಸು ಲೇಸಾಯಿತು ಮಾ ankita mahipati

 ಕಾಖಂಡಕಿ ಶ್ರೀ ಮಹಿಪತಿರಾಯರು

ಲೇಸು ಲೇಸಾಯಿತು ಭಾಸ್ಕರ ಗುರು ಕೃಪೆ ಲೇಸು ಲೇಸಾಯಿತು ಮಾ ಪ  


ಹಸ್ತವಿಡಲು ಎನ್ನ ಮಸ್ತಕದ ಮೇಲೆ ಸ್ವಸ್ತಹೊಂದಿತು ಮನ ನಿಶ್ಚಯಲಿ ವಿಸ್ತಾರದೋರುವ ವಸ್ತು ಇದೆಯೆಂದು ವಿಸ್ತರಿಸೆನಗಿನ್ನು ದೋರಿತು ಮಾ 1 

ಸೋಂಕಲು ಶ್ರೀಗುರುಪಾದ ಎನಗಿನ್ನು ಬೇಕಾದ ಸವಿ ಸುಖಗೊಟ್ಟಿತು ಮಾ ಸಕಲೋತ್ತಮನಾದ ಏಕಾಕ್ಷರ ಬ್ರಹ್ಮ ಏಕೋಮಯವಾಗಿದೋರಿತು ಮಾ 2 

ನೀಡಲು ನಿಜ ಸುಙÁ್ಞನದ ಭಿಕ್ಷೆಯು ಭವ ದುಷ್ಕಾಳವು ಮಾ ಕೂಡಿತು ಸಮರಸವಾಗಿ ಮಹಿಪತಿ ಜೀವ ಒಡಿಯನ ಚರಣದಂಗುಷ್ಠದಲಿ ಮಾ 3

***


No comments:

Post a Comment