Wednesday, 1 September 2021

ತ್ರಾಹಿ ತ್ರಾಹಿ ತ್ರಾಹಿ ತ್ರಾಹಿ ಗುರುನಾಥ ತ್ರಾಹಿ ತಾರಕಬ್ರಹ್ಮ ankita mahipati

 ಕಾಖಂಡಕಿ ಶ್ರೀ ಮಹಿಪತಿರಾಯರು

ತ್ರಾಹಿ ತ್ರಾಹಿ ತ್ರಾಹಿ ತ್ರಾಹಿ ಗುರುನಾಥ ತ್ರಾಹಿ ತಾರಕಬ್ರಹ್ಮ ಸಾಯೋಜ್ಯತ ತ್ರಾಹಿ ಅನಾಥ ಬಂಧು ಸಾಕ್ಷಾತ ತ್ರಾಹಿ ದೀನಾನಾಥ ತ್ರಾಹಿ ತ್ರಾಹಿ 1 

ಮಾಡಲರಿಯೆ ನಾನಿಮ್ಮ ನಿಜಸ್ತುತಿ ಹಿಡಿಯಲರಿಯೆ ದೃಢ ಸದ್ಭಕ್ತಿ ಪೊಡವಿಯೊಳು ನಾ ಮೂಢಮಂದಮತಿ ಕೂಡಿಕೊಂಬೊ ದಯಮಾಡೋ ಶ್ರೀಪತಿ 2 

ಮೊದಲಿಗಾಡುವ ಬಾಲಕವೃತ್ತಿ ತೊದಲುನುಡಿ ತಾಯಿಗತಿ ಪ್ರೀತಿ ಇದೆ ಪರಿಯಲೊಪ್ಪಿಸಿಕೊಂಬ ಸ್ತುತಿ ಮೇದಿನಿಯೊಳು ನಿಮ್ಮ ಖ್ಯಾತಿ 3 

ಆಡಿಸಿದಂತೆ ಆಡುವೆ ನಾ ನುಡಿ ನಡೆಸಿಕೊಂಬುದು ಸನ್ಮತ ಮಾಡಿ ಕೊಡುವಂತೆ ಮಾನ್ಯ ಸಂತರೊಡಗುಡಿ ಮಾಡೊ ದಯ ನಿಮ್ಮಭಯನೀಡಿ 4 

ತ್ರಾಹಿ ತ್ರಾಹಿಯೆಂಬೆ ತನು ಮನರ್ಪಿಸಿ ತ್ರಾಹಿಯೆಂಬೆ ಶಿರಸಾಷ್ಟಾಂಗ ನಮಿಸಿ ಕಾಯೊ ಮಹಿಪತಿಯ ಕರುಣಿಸಿ 5

****


No comments:

Post a Comment