ಕಾಖಂಡಕಿ ಶ್ರೀ ಮಹಿಪತಿರಾಯರು
ತ್ರಾಹಿ ತ್ರಾಹಿ ತ್ರಾಹಿ ಎನ್ನಿ ಕೈಯ ಮುಗಿದೊಮ್ಮೆ | ಕೈ ... ತ್ರಾಹಿ ತ್ರಾಹಿ ತ್ರಾಹಿ ಎನ್ನಿ ಮನದಲಿನ್ನೊಮ್ಮೆ pa
ಪುಣ್ಯಕ್ಷೇತ್ರವಹುದಿದು ಸಾರವಾಡಗ್ರಾಮ | ಸಾ... ಕಣ್ಣಾರೆ ಕಂಡು ಯಾತ್ರೆಗೆ ಬಾಹುದು ಬ್ರಹ್ಮಸ್ತೋಮ | ಬಾ... ಸಣ್ಣ ದೊಡ್ಡವರಿಗೆಲ್ಲ ಭಾಸುದು ಸಂಭ್ರಮ | ಭಾ... ದಣಿವು ಹಿಂಗಿ ದೋರುತಿಹುದು ಆನಂದೊಬ್ರಹ್ಮ 1
ಧರೆಯೊಳಧಿಕವಾದ ಕ್ಷೇತ್ರವಿದೆ ಕಾಶಿ | ಕ್ಷೇ... ಹರಿಯುತಿಹುದು ನೋಡಿ ಙÁ್ಞನ ಗಂಗೆಯು ಸೂಸಿ | ಙÁ್ಞ... ಸ್ಮರಣಿಯಿಂದ ಹರಿ ಸೇವ್ಯಾಹುದು ಪಾಪದರಾಶಿ | ಪಾ... ಗುರು ವಿಶ್ವೇಶ್ವರ ತಾರಿಸುತಿಹ ಕರುಣಿಸಿ 2
ಸರ್ವ ತೀರ್ಥ ಮಿಂದ ಫಲ ಬಾಹುದಿಲ್ಲೆ ನೋಡಿ | ಬಾ... ಪೂರ್ವ ಕರ್ಮಾದಿಗಳೆಲ್ಲ ಹೋದವಿಲ್ಲೆ ನೋಡಿ | ಹೋ... ಸರ್ವರು ಅರಿತು ನೀವು ಇದೆ ಯಾತ್ರೆಯ ಮಾಡಿ | ಇ... ನಿರ್ವಾಣ ಪರ್ವಣೀಯ ಫಲ ಬಾಹುದು ಕೈಗೂಡಿ3
ಪುಣ್ಯಗೈದ ವಿಶ್ವನಾಥ ಸತಿಸಹಗೂಡಿ | ಸ... ಜನುಮಾಂತ್ರದ ದೋಷಗಳದಿಲ್ಲೆ ನೋಡಿ | ಗ... ಘನ ಸುಖ ಪಡೆದುನುಮಾನ ಈಡ್ಯಾಡಿ | ಈ... ವರ್ಣಿಸಲಾಗುದು ಸ್ತುತಿ ಸ್ತವನ ಪಾಡಿ 4
ಮನವಿಟ್ಟು ಕೇಳಿ ಸ್ತುತಿ ಭಾವ ಭಕ್ತಿಯಿಂದ | ಭಾ... ಪುಣ್ಯಗೈತೆನ್ನ ಜೀವ ಅನುಭವದಿಂದ | ಅ... ಉನ್ಮನವಾಗಿ ದೋರಿತು ಬ್ರಹ್ಮಾನಂದ | ದೋ... ಧನ್ಯವಾದ ಮಹಿಪತಿ ಗುರು ಕೃಪೆಯಿಂದ 5
****
No comments:
Post a Comment