by ಶ್ರೀ ಮಹಿಪತಿರಾಯರು
ಏನೋ ಮನವೇ ನೀಹೀಂಗಾದಿ P
ಏನೋ ಮನವೇ ನೀ ಹೀಂಗಾದಿ |
ಸ್ವಾನಂದ ಸುಖ ತಿಳಿಯದೆ ಬಳದಿ |
ಮಾನುಭವರ ವಿಡಿನಿಜ ಹಾದಿ |
ಭವ ವ್ಯಾಧಿ 1
ಮಂದ ಮತಿತನ ಬಿಡು ಗುಣದಾ |
ಹೊಂದೋ ಸದ್ಗುರುವಿನ ಪಾದಾ |
ಛಂದದಿ ಪಡಿಯೋ ನಿಜ ಬೋಧಾ |
ಸಂದೇಹ ಬಿಡಿಸೆಚ್ಚರಿಸುವದಾ2
ಹೊಗೆ ಅಗ್ನಿಯ ಮುಸುಕಿಹ ಪರಿಯಾ |
ಮಾಯಾ |
ಬಿಗಿದಾವರಿಸಿಹುದು ನೋಯಾ |
ಬ್ಯಾಗನೆ ತಿಳಿ ಗೆಲುವ ಉಪಾಯಾ 3
ಮುಂದ ಹಾಕಿದ ಹೆಜ್ಜೆಯನು |
ಹಿಂದಕ ತಿರುಗಿಸದಿರು ನೀನು |
ನಿಂದಿಸಲೊಂದಿಸಲಾರೇನು |
ಮುಂದಗಿಡದೆ ಬೆರಿ ವಸ್ತವನು 4
ನಿನ್ನ ಸುದ್ದಿಯು ತಾ ನಿನಗಿಲ್ಲಾ |
ಇನ್ನಾರೆ ತಿಳಿತನು ಸ್ಥಿರವಲ್ಲಾ |
ಮುನ್ನಿನ ಪರಿಕೆಡುವುದು ಸಲ್ಲಾ |
ಮನ್ನಿಸು ಮಹಿಪತಿ ಜನ ಸೊಲ್ಲಾ 5
***
ಏನೋ ಮನವೇ ನೀ ಹೀಂಗಾದಿ p
ಏನೋ ಮನವೇ ನೀ ಹೀಂಗಾದಿ | ಸ್ವಾನಂದ ಸುಖ ತಿಳಿಯದೆ ಬಳದಿ | ಮಾನುಭವರ ವಿಡಿನಿಜ ಹಾದಿ | ಭವ ವ್ಯಾಧಿ 1
ಮಂದ ಮತಿತನ ಬಿಡು ಗುಣದಾ | ಹೊಂದೋ ಸದ್ಗುರುವಿನ ಪಾದಾ | ಛಂದದಿ ಪಡಿಯೋ ನಿಜ ಬೋಧಾ | ಸಂದೇಹ ಬಿಡಿಸೆಚ್ಚರಿಸುವದಾ2
ಹೊಗೆ ಅಗ್ನಿಯ ಮುಸುಕಿಹ ಪರಿಯಾ | ಮಾಯಾ | ಬಿಗಿದಾವರಿಸಿಹುದು ನೋಯಾ | ಬ್ಯಾಗನೆ ತಿಳಿ ಗೆಲುವ ಉಪಾಯಾ 3
ಮುಂದ ಹಾಕಿದ ಹೆಜ್ಜೆಯನು | ಹಿಂದಕ ತಿರುಗಿಸದಿರು ನೀನು | ನಿಂದಿಸಲೊಂದಿಸಲಾರೇನು | ಮುಂದಗಿಡದೆ ಬೆರಿ ವಸ್ತವನು 4
ನಿನ್ನ ಸುದ್ದಿಯು ತಾ ನಿನಗಿಲ್ಲಾ | ಇನ್ನಾರೆ ತಿಳಿತನು ಸ್ಥಿರವಲ್ಲಾ | ಮುನ್ನಿನ ಪರಿಕೆಡುವುದು ಸಲ್ಲಾ | ಮನ್ನಿಸು ಮಹಿಪತಿ ಜನ ಸೊಲ್ಲಾ 5
***
No comments:
Post a Comment