Monday, 6 September 2021

ಸೋಜೀಗರೊಳಗತಿ ಸೋಜೀಗ ರಾಘವೇಂದ್ರಾ ಗುರು ankita krishnavittala

 ರಾಗ: [ಶಂಕರಾಭರಣ] ತಾಳ: [ಮಿಶ್ರನಡೆ]


ಸೋಜೀಗರೊಳಗತಿ ಸೋಜೀಗ ರಾಘವೇಂದ್ರಾ ಗುರು


ಸೋಜೀಗವಲ್ಲವೆ ರಾಜಾ ಗುರುವು ನೀನು

ನೈಜರೂಪದಿ ಬಂದು ಮಾಜಾದೆ ಪೊರೆವುದು ಅ.ಪ


ಬೆಂಬಲ ನಿನಗೆಂದು ಸ್ತಂಭದಿ ಹರಿಬಂದ

ಬೆಂಬಲ ನೀ ನಮಗೆ ಇಂಬುಪಾಲಿಸು ಗುರುವೇ

ನಂಬೀದ ಜನಗಣ ಡಿಂಭದಿ ನೀ ಮೂಡಿ

ಹಂಬಲವಳಿಪುದು ಅಂಬಕದೊಳು ಕಂಡೇ 1

ಇಲ್ಲ ಹರಿಯು ಎಂಬ ಕ್ಷುಲ್ಲಸಂಶಯವೆಂಬ

ಹಲ್ಲುಮುರಿದು ಭಕ್ತರಲ್ಲಿ ತುಂಬುವೆ ಭಕ್ತಿ

ಇಲ್ಲದಿರಲು ನೀನು ಕಳ್ಳ ಕಲಿಯು ಜಗ-

ವೆಲ್ಲ ತುಂಬುತ ಶೃತಿ ಸುಳ್ಳು ಎನಿಸುತಿದ್ದಾ 2

ನಿರುತನೀಡುತ ಹರಿಕೆ ಕರೆದು ಪೊರೆವೆ ಜನರ

ಸರಿಯು ಕಾಣೆನು ನಿನಗೆ ಹರಿಯ ಕಿಂಕರ ಶರಣು

ಮರುತದೇವನಮತ ಮೆರೆಸಿ ಕುಣಿಸುತ್ತಿರುವೆ

ಶರಣಜನರ ಪೊರೆವ ಪರಮಾಪ್ತಸಿದ್ಧವೋ 3

ಹುಣ್ಣು ಅಳಿಸಿ ಭಕ್ತಿ ಹಣ್ಣು ತಿನ್ನಿಸಿ e್ಞÁನ

ಕಣ್ಣು ಪಾಲಿಪ ಗುರು ಮಣ್ಣುಗೂಡಿಸೊ ಭವವ

ಸಣ್ಣವರೆಮ್ಮ ಶಂಕುಕರ್ಣನೆ ಸಲಹೈಯ್ಯ

ಗಣ್ಯರೊಳಗೆಗಣ್ಯ ಪೂರ್ಣಪ್ರಜ್ಞರಪ್ರೀಯಾ 4

ಹಿಂದೆ ಹೋಯಿತು ಹೊತ್ತು ಮುಂದೆ ಕಾದಿದೆ ಮೃತ್ಯು

ಇಂದು ಭಾರವ ಪೊತ್ತು ಕಂದರೆಮ್ಮನು ಕಾಯೋ

ಇಂದ್ರತಾತನ ಹೃದಯಮಂದೀರದಲಿ ನಲಿವ

ಇಂದಿರೇಶ ಕೃಷ್ಣವಿಠಲರಾಯನ ತೋರು 5

***


No comments:

Post a Comment