Monday, 6 September 2021

ಬೇಡುವೆ ವರಗಳ ಮಂತ್ರಾಲಯ ಪ್ರಭುವೆ ankita mangalangahari vittala

 ankita ಮಂಗಳಾಂಗಹರಿವಿಠಲ 

ರಾಗ: ಕಲ್ಯಾಣಿ ತಾಳ: ಏಕ


ಬೇಡುವೆ ವರಗಳ ಮಂತ್ರಾಲಯ ಪ್ರಭುವೆ


ನೀಡು ಸನ್ಮತಿಯ ಸಂತರ ನಿಜ ಗುರುವೆ ಅ.ಪ


ಜನುಮಜನುಮದ ಪಾಪಗಳನೆ ಅಳಿದು

ಅನುದಿನ ಬಾಧಿಪ ಆಧಿವ್ಯಾಧಿಗಳಳಿದು

ತನುವಿಗಾಶ್ರಯವಾದ ತ್ರಯತಾಪವಳಿದು

ಹನುಮನಯ್ಯನಲ್ಲಿ ಮನನಿಲ್ಲಿಸೆಂದು 1

ಅಷ್ಟಮದಗಳಳಿದು ಇಷ್ಟ ಪೂರ್ತಿಗೈದು

ಕಷ್ಟ ಸುಖ ಮೊದಲಾದ ದ್ವಂದ್ವ ನಾಶನಗೈದು

ಶಿಷ್ಯನೆಂದೆನಿಸೆನ್ನ ಭ್ರಷ್ಟ ಗುಣಗಳ ಬಡಿದು

ಇಷ್ಟದಾಯಕನೆ ಅನಿಷ್ಟಗಳಳಿಸೆಂದು 2

ಭಂಗಗಳ ಪರಿಹರಿಸಿ ಹಿಂಗಿಸಿಜನುಮಗಳ

ಮಂಗಳಾಂಗಹರಿವಿಠಲನ ದ್ವಂದ್ವ ಪಾದಂಗಳ

ಕಂಗಳಿಂದಲಿ ಕಾಂಬ ಮನದ ಹಂಬಲಗಳ

ಅಂಗಜನಗೆಲಿದಯತಿಯೇ ಪೂರೈಸು ಇಚ್ಛೆಗಳ  3

***


No comments:

Post a Comment