Monday, 6 September 2021

ಬೇಡುವೆನೋ ನಿನ್ನ ಗುರು ರಾಘವೇಂದ್ರ ಬೇಡುವೆನೋ ನಿನ್ನ ankita udayadreesha vittala

 ರಾಗ: ಮೋಹನ ತಾಳ: ಆದಿ

ಬೇಡುವೆನೋ ನಿನ್ನ ಗುರು ರಾಘವೇಂದ್ರ 

ಬೇಡುವೆನೋ ನಿನ್ನ


ಕಾಡುವ ರೋಗವನೋಡಿಸಿ ನಿನ್ನನೆ

ನೋಡುವ ಸೌಭಾಗ್ಯ ನೀಡೋ ಪ್ರಸನ್ನ ಅ. ಪ


ಸುರಮುನಿ ಉಪದೇಶದೆ ಗರ್ಭದೊಳಿದ್ದು

ಪರಮ ವೈಷ್ಣವನೆನಿಸಿದೆ

ದುರುಳ ಪಿತನ ಬಾಧೆ ಸಹಿಸುತ ಇರಲಾಗೆ

ನರಸಿಂಹನನೇ ಕಂಬದಲಿ ತೋರ್ದೆ

ಧೃತ:

ಹರಿ ಸರ್ವೊತ್ತಮನೆಂಬುವ ಸತ್ಯವ

ಧರೆಯೋಳು ಸ್ಥಾಪಿಸಿ ಮೆರೆಸಿದೆ ಗುರುವೇ

ಮರುತನಾವೇಶದ ಬಲವನೇ ಪಡೆದು

ಎರಡೆರಡು ಕಕ್ಷೆ ಸೇರಿದ ಮಹಿಮ 1

ಸಿರಿರಾಮಚಂದ್ರನ ಅರ್ಚಿಸಿದವನೇ

ನರಹರಿಯ ಪ್ರಿಯನೇ

ವರ ವೇದವ್ಯಾಸರಿಗತಿಪ್ರಿಯನಾದ

ಸಿರಿ ಕೃಷ್ಣನ ಪಾದ ಭಜಿಸಿ ಪಡೆದೆ ಮೋದ

ಧೃತ:

ಮರುತ ಮತದ ತತ್ತ್ವ ಭರದಿ ಸಂಗ್ರಹಿಸುತ

ಪರಿಮಳಾದಿ ಸುಗ್ರಂಥವ ರಚಿಸುತ

ವರಹಜೆ ತಟದ ಮಂಚಾಲೆಯಲಿರುತ

ಮೆರೆದಿಹೆ ಬೃಂದಾವನದಲಿ ನೆಲೆಸುತ 2

ಕರೆದಲ್ಲಿಗೆ ಬರುವೇ ಅಸ್ಮದ್ಗುರುವೇ 

ಶರಣು ಬಂದವರ ಪೋರೇವೆ

ನಿರುತ ಸ್ಮರಿಸುವರಘ ಪರಿಹರಿಸುತಲವರ

ಕರುಣದಿಂದಲಿ ಕಾವೇ ವರ ಕಲ್ಪತರುವೇ 

ಧೃತ:

ದುರಿತ ಶರಧಿಯೊಳು ಮುಳುಗಿರುವವನಿಗಾ-

ಸರೆಯೊಂದೇ ನಿನ್ನಯ ಸ್ಮರಣೆ 

ವರದ ಉದಯಾದ್ರೀಶವಿಠಲನ

ಚರಣ ಕಮಲವ ತೋರೋ ಬೇಗನೆ 3

***


No comments:

Post a Comment