ರಾಗ: ಕಾನಡ ತಾಳ: ಖಂಡಛಾಪು
ರೋಗವನೆ ಪರಿಹರಿಸೋ ಭವರೋಗ ವೈದ್ಯ ಪ
ರಾಘವನ ಪೂಜಿಸುವ ಭಾಗವತ ಪ್ರಿಯ ಅ. ಪ
ವರಹಜೆ ತಟವಾಸ ಪುರ ಮಂತ್ರಾಲಯಾಧೀಶ
ವರ ಬೃಂದಾವನದಿ ವಾಸ ಮೆರೆವೆ ಪ್ರತಿದಿವಸ
ಸುರಮುನಿ ಉಪದೇಶ ಹರಿರೇವ ವಿಜಿಜ್ಞಾಸ
ಹರಿಸೋ ಮನಕ್ಲೇಶ ದೂರಮಾಡಿ ಆಶಾ 1
ಬಂಗಾರ ಕಣ್ಣನ ಅಣ್ಣನ ಎದುರಿನೊಳು
ರಂಗ ಸರ್ವೋತ್ತಮನೆಂಬ ಸತ್ಯವನೇ ತಿಳಿಸಿ
ಹಿಂಗಿಲ್ಲದೇ ಬಂದ ಭಂಗವನೇ ತಾ ಸಹಿಸಿ ನರ-
ಸಿಂಗನನು ತೋರಿಸಿದ ಉತ್ತುಂಗ ಮಹಿಮ 2
ವ್ಯಾಸರಾಯ ಮುನಿ ಎನಿಸಿ ವಾಸುದೇವನ ಸೇವಿಸಿ
ಶ್ರೀಶ ಕೃಷ್ಣನಂಕಿತದಿ ಕೀರ್ತನೆಗಳ ರಚಿಸಿ
ವ್ಯಾಸ ದಾಸ ಕೂಟ ಸಮನ್ವಯವನೇ ತಿಳಿಸಿ
ಶ್ರೇಷ್ಠ ಚಂದ್ರಿಕೆ ರಚಿಸಿ ವಸುಧೆಯೊಳು ಮೆರೆಸಿ 3
ಅನಿಷ್ಠ ಪುಣ್ಯವ ಗಳಿಸಿ ಕನಿಷ್ಟರ ಹಿತಕೆ ಬಳಸಿ
ಅನೇಕ ಸೇವೆ ಸ್ವೀಕರಿಸಿ ದೀನರನ್ನುದ್ಧರಿಸಿ
ಜಿಷ್ಣುನಣ್ಣನಾವೇಶ ವಿಷ್ಣುವಿನ ಆದೇಶ
ಚೆನ್ನ ಬೃಂದಾವನದಿ ವಾಸ ಎನಗೀಯೋ ಲೇಶ 4
ಶರಣೆಂದು ಬರುವ ಭಕುತರಿಗೆ ಕಲ್ಪತರು
ಕರೆದು ಅಭಯನೀವ ಸುರ ಕಾಮಧೇನು
ವರದ ಉದಯಾದ್ರೀಶವಿಠಲನ ನಿಜದಾಸ
ಚರಣ ಭಜಕರಘನಾಶ ಪೊರೆಯುತಿಹೇ ಅನಿಶಾ 5
***
No comments:
Post a Comment